Thursday, June 4, 2026
Homeಕರಾವಳಿಇಡೀ ದೇಶಾದ್ಯಂತ NIA ಏಕಕಾಲಕ್ಕೆ ದಾಳಿ ; ಮಂಗಳೂರಿನ ಹಲವು ಕಡೆ  ದಾಳಿ

ಇಡೀ ದೇಶಾದ್ಯಂತ NIA ಏಕಕಾಲಕ್ಕೆ ದಾಳಿ ; ಮಂಗಳೂರಿನ ಹಲವು ಕಡೆ  ದಾಳಿ

- Advertisement -
- Advertisement -

ಮಂಗಳೂರು: ಇಡೀ ದೇಶಾದ್ಯಂತ NIA ಏಕಕಾಲಕ್ಕೆ ದಾಳಿ ಮಾಡಿದ್ದು,ಮಂಗಳೂರಿನ ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಕಚೇರಿ ಮೇಲೆ NIA ದಾಳಿ‌ ಮಾಡಿದೆ.ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್.ಐ.ಎ ದಾಳಿ ಮಾಡಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರೋ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆ ಮೇಲೂ ದಾಳಿ ಮಾಡಿದೆ.

ಇನ್ನು ಬಜ್ಪೆಯಲ್ಲಿ ಶರೀಫ್ ಮನೆ(ಮಾಜಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ) , ಅಬೂಬಕ್ಕರ್  ಕುಲಾಯಿ ಸಹೋದರನ ಮನೆ  , ಜೊಕ್ಕಟ್ಟೆಯಲ್ಲಿ ಅಶ್ರಫ್ .ಎ.ಕೆ ಮನೆ ಮೇಲೆ ದಾಳಿ ಮಾಡಿದೆ. ಉಪ್ಪಿನಂಗಡಿ ಅಯೂಬ್ ಅಗ್ನಾಡಿ ಮನೆಗೆ ಎರಡನೇ ಬಾರಿ ಎನ್.ಐ.ಎ ದಾಳಿ ಮಾಡಿದೆ. ಮೊನ್ನೆ ಮನೆಯಲ್ಲಿರಲ್ಲಿಲ್ಲ ಅದಕ್ಕೆ ಇಂದು ವಾಪಸ್ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದೆ.

ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗಿ, ಇದು ಸರಕಾರಿ ದಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

- Advertisement -

Latest News

error: Content is protected !!