- Advertisement -
- Advertisement -
ಬೆಂಗಳೂರು: ವಕ್ಫ್ ಆಸ್ತಿ ಒತ್ತುವರಿ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವಂತೆ ಕರಾವಳಿಯ ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪ ಮಾಡಿದ ಉಡುಪಿ ಶಾಸಕ ರಘುಪತಿ ಭಟ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದೇ ವೇಳೆ ವಕ್ಫ್ ಆಸ್ತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್, ವಕ್ಫ್ ಆಸ್ತಿ ಬಗ್ಗೆ ಮಾತನಾಡಿದ ಸುನೀಲ್ ಕುಮಾರ್, ಸಂಜೀವ ಮಠಂದೂರು, ರಘುಪತಿ ಭಟ್, ಯತ್ನಾಳ್ ಅವರನ್ನು ಅಭಿನಂದಿಸುತ್ತೇನೆ, ಹಿಂದೂ ಸಹೋದರರ ಬಗ್ಗೆ, ಹಿಂದೂ ಸಮುದಾಯದ ಬಗ್ಗೆ ಕೂಡಾ ಇಷ್ಟು ಇವರು ಮಾತಾಡಲಿಲ್ಲ,
ಕರಾವಳಿಯ ಸಮಸ್ಯೆ ಬಗ್ಗೆ, ಮೀನುಗಾರರ ಸಮಸ್ಯೆ ಬಗ್ಗೆ ಮಾತಾಡಲಿಲ್ಲ ಎಂದು ಕರಾವಳಿಯ ಶಾಸಕರ ಬಗ್ಗೆ ಸದನದಲ್ಲಿ ನಗುತ್ತಲೇ ವ್ಯಂಗ್ಯ ಮಾಡಿದರು.
- Advertisement -