Wednesday, June 3, 2026
Homeಕರಾವಳಿಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಎನ್ ಐಎ ಅಧಿಕಾರಿಗಳು...

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಎನ್ ಐಎ ಅಧಿಕಾರಿಗಳು ಭೇಟಿ

- Advertisement -
- Advertisement -

ಮಂಗಳೂರು: ನಾಗುರಿ ಸಮೀಪ ಅಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ‌ದ ಎನ್ ಐಎ ತನಿಖೆ ಆರಂಭವಾಗಲಿದೆ.

ಇಂದು ಮಂಗಳೂರು ನಗರ
ಪೊಲೀಸ್ ಆಯುಕ್ತರ ಕಚೇರಿಗೆ ಎನ್ ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸರಿಂದ ಎನ್ ಐಎ ಅಧಿಕಾರಿಗಳಿಗೆ ಸ್ಫೋಟ ಪ್ರಕರಣದ ಕೇಸ್ ಹಸ್ತಾಂತರಿಸಲಾಗಿದ್ದು, ಇಂದಿನಿಂದ ಎನ್ ಐಎ ತನಿಖೆ ಆರಂಭವಾಗಲಿದೆ.

ಕೆಲವು ದಿನಗಳ ಹಿಂದೆ ಪ್ರಾಥಮಿಕ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿ ರಾಜ್ಯ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಆರೋಪಿ ಶಾರೀಕ್ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿತ್ತು. ಸ್ಫೋಟದಲ್ಲಿ ಆಟೋ ಚಾಲಕ ಪುರುಷೋತ್ತಮ ಮತ್ತು ಆರೋಪಿ ಶಾರೀಕ್ ಇಬ್ಬರೂ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

- Advertisement -

Latest News

error: Content is protected !!