ಕೊರೊನಾ ಮಹಾಮಾರಿ ಎಲ್ಲೆಡೆ ಪೆಡಂಭೂತದಂತೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜನ ಅಂತರ ಕಾಯ್ದುಕೊಂಡಷ್ಟು ರೋಗ ಹರಡುವುದನ್ನು ತಡೆಯಬಹುದು ಅಂತ ಹೇಳಲಾದರೂ ಜನ ಇದನ್ನು ಕೇಳುತ್ತಿಲ್ಲ.
ಹೀಗಾಗಿ ಲಾಕ್ ಡೌನ್ ಮಾಡಲಾಗಿದ್ದು, ಇದರ ನಡುವೆಯೂ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಹೆಚ್ಚು ಗ್ರಾಹಕರು ಸೇರಬಾರದು ಅಂತಾ ಆನ್ ಲೈನ್ ನಲ್ಲಿಯೇ ಹೆಚ್ಚು ವ್ಯವಹಾರ ಮಾಡಿ ಅಂತ ಹೇಳಲಾಗಿದೆ. ಆದರೂ ಗ್ರಾಹಕರು ಬ್ಯಾಂಕ್ ಗಳಿಗೆ ಹೋಗುತ್ತಿದ್ದರು.
ಇದೀಗ ಇದನ್ನು ತಡೆಯಲು ಹೊಸದೊಂದು ನಿಯಮ ಜಾರಿಗೆ ತರಲಾಗುತ್ತಿದೆ. ಬ್ಯಾಂಕ್ ಗೆ ಹೋಗಿ ಹಣ ವಿತ್ ಡ್ರಾ ಮಾಡಬೇಕು ಎನ್ನುವವರಿಗೆ ನಿಯಮಾವಳಿಗಳನ್ನು ಭಾರತೀಯ ಬ್ಯಾಂಕ್ ಗಳ ಸಂಘ ತಂದಿದೆ. ಹೊಸ ನಿಯಮದ ಅಡಿಯಲ್ಲಿ ಎಲ್ಲರೂ ಬ್ಯಾಂಕ್ ಹೋಗಿ ಹಣ ತೆಗೆಯಲು ಅವಕಾಶ ಇರುವುದಿಲ್ಲ.
ಬ್ಯಾಂಕ್ ಖಾತೆ ಸಂಖ್ಯೆ ಕೊನೆಯಲ್ಲಿ 0 ಅಥವಾ 1 ಇದ್ದರೆ ಅವರು ಮೇ 4ರಂದು ಬ್ಯಾಂಕ್ ನಲ್ಲಿ ಹಣ ತೆಗೆಯಬಹುದು. 2 ಮತ್ತು 3 ನಂಬರ್ ಇದ್ದರೆ ಮೇ 5 ರಂದು ಹಣ ತೆಗೆಯಬಹುದು. 4 ಮತ್ತು 5 ಸಂಖ್ಯೆ ಇದ್ದರೆ ಮೇ 6 ರಂದು ಹಣ ತೆಗೆಯಬಹುದು.
ಬ್ಯಾಂಕ್ ಖಾತೆಯ ಕೊನೆಯಲ್ಲಿ 6 ಮತ್ತು 7 ಸಂಖ್ಯೆ ಹೊಂದಿರುವವರು ಮೇ 8 ರಂದು ಹಣ ತೆಗೆಯಬಹುದು. 8 ಸಂಖ್ಯೆ ಮೇ 9ರಂದು ಹಾಗೂ 9 ನಂಬರ್ ಹೊಂದಿರುವವರು ಮೇ 11ರಂದು ಹಣ ತೆಗೆಯಬಹುದಾಗಿದೆ. ಹೀಗೆ ಒಂದೊಂದು ಸಂಖ್ಯೆಗೆ ಒಂದೊಂದು ದಿನ ನಿಗದಿ ಮಾಡಲಾಗಿದೆ.