Sunday, June 7, 2026
Homeತಾಜಾ ಸುದ್ದಿಪ್ರತಿ ಕಂದಾಯ ವಿಭಾಗಗಳಲ್ಲಿನ ನೂರು ಗ್ರಾಮಗಳಲ್ಲಿ ಹೊಸ ಆರ್.ಟಿ.ಸಿ. ಗಳನ್ನು ಆಗಸ್ಟ್ ಒಳಗೆ ವಿತರಿಸಬೇಕು: ಮುಖ್ಯಮಂತ್ರಿ...

ಪ್ರತಿ ಕಂದಾಯ ವಿಭಾಗಗಳಲ್ಲಿನ ನೂರು ಗ್ರಾಮಗಳಲ್ಲಿ ಹೊಸ ಆರ್.ಟಿ.ಸಿ. ಗಳನ್ನು ಆಗಸ್ಟ್ ಒಳಗೆ ವಿತರಿಸಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

- Advertisement -
- Advertisement -

ಬೆಂಗಳೂರು: ರಾಜ್ಯದ ಎಲ್ಲಾ ಕಂದಾಯ ವಿಭಾಗಗಳ ತಲಾ 100 ಗ್ರಾಮಗಳಲ್ಲಿ ಹೊಸ ಆರ್.ಟಿ.ಸಿ. ಗಳನ್ನು ಆಗಸ್ಟ್ ತಿಂಗಳಿನೊಳಗೆ ವಿತರಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ‌

2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ‌ ಈ ಸೂಚನೆ‌ ನೀಡಿದ್ದಾರೆ.

ಅಲ್ಲದೇ ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳ ಡ್ರೋನ್ ಆಧಾರಿತ ಸರ್ವೆ ಕಾರ್ಯವನ್ನು ಕೈಗೊಂಡು ದಾಖಲೆಗಳ ಡಿಜಿಟಲೀಕರಣವಾಗಬೇಕು ಮತ್ತು ಪೋಡಿ ಕೆಲಸಗಳು ಸೂಕ್ತವಾಗಿ ಆಗಬೇಕು ಎಂದು ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಆರ್.ಟಿ.ಸಿ. ಗಳನ್ನು ಅಧಿಕೃತವಾಗಿ ನೀಡುವ ಬಗ್ಗೆ ಪರಿಶೀಲನಾ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕು. ಭೂ ವಿವಾದಗಳ ಪ್ರಕರಣಗಳಿಂದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ‌ ನಿರ್ದೇಶನ ನೀಡಿದ್ದಾರೆ.

- Advertisement -

Latest News

error: Content is protected !!