Thursday, April 25, 2024
Homeತಾಜಾ ಸುದ್ದಿಅಂಚೆ ಪತ್ರಗಳನ್ನು ವಿತರಿಸಲು 15 ಕಿ.ಮೀ.ಕಾಡಿನಲ್ಲಿ ನಡೆಯುತ್ತಿರುವ ಪೋಸ್ಟ್ ಮ್ಯಾನ್

ಅಂಚೆ ಪತ್ರಗಳನ್ನು ವಿತರಿಸಲು 15 ಕಿ.ಮೀ.ಕಾಡಿನಲ್ಲಿ ನಡೆಯುತ್ತಿರುವ ಪೋಸ್ಟ್ ಮ್ಯಾನ್

spot_img
- Advertisement -
- Advertisement -

ಚೆನ್ನೈ: ಎಷ್ಟೋ ಬಾರಿ ನಮ್ಮ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗದಿದ್ದಾಗ ನಾವು ಎಷ್ಟೋ ಮಾನಸಿಕವಾಗಿ ಕುಗ್ಗುತ್ತೇವೆ. ಯಾರು ನಮ್ಮನ್ನು ಗುರುತಿಸುವವರೇ ಇಲ್ಲ ಎಂದು ಕೋಪಗೊಳ್ಳುತ್ತವೆ. ಆದರೆ ಇಲ್ಲೊಬ್ಬರ ಪರಿಶ್ರಮ ಜಗತ್ತಿಗ್ಗೆ ತಿಳಿಯಲು ಬರೋಬ್ಬರಿ 30 ವರ್ಷಗಳೇ ಬೇಕಾಗಿದೆ.

ಹೌದು ತಮಿಳುನಾಡಿನ ಡಿ. ಶಿವನ್ ಎಂಬ ಈ ಪೋಸ್ಟ್ ಮ್ಯಾನ್ ಕಳೆದ 30 ವರ್ಷಗಳಿಂದ ಕೂನೂರಿನ ಹಿಲ್ ಗ್ರೋವ್ ಅಂಚೆ ಕಚೇರಿಯಿಂದ 15 ಕೀಮಿ ದೂರದಲ್ಲಿರುವ ಸಿಂಗಾರ ಮತ್ತು ಮರಪಲಂ ಬಳಿಯ ಕಾಡುಗಳಲ್ಲಿನ ಜನವಸತಿ ಪ್ರದೇಶಗಳಿಗೆ ನಡೆದುಕೊಂಡೇ ಹೋಗಿ ಅಂಚೆ ಪತ್ರ ಬಟವಾಡೆ ಮಾಡುತ್ತಿದ್ದರು.

ಪ್ರತಿ ದಿನ ಹದಿನೈದು ಕಿಲೋಮೀಟರ್ ನಡೆದುಕೊಂಡೇ ದಟ್ಟ ಕಾಡಿನಲ್ಲಿ ಸಾಗುವಾಗ ಇವರಿಗೆ ಅನೇಕ ಬಾರಿ ಆನೆ, ಕರಡಿ ಸೇರಿ ವಿವಿಧ ಪ್ರಾಣಿಗಳನ್ನು ಮುಖಾಮುಖಿಯಾಗಿದ್ದಾರಂತೆ. ಮೂವತ್ತು ವರ್ಷ ಕಾರ್ಯತತ್ಪರತೆಯಿಂದ ಕೆಲಸ ಮಾಡಿ ಇತ್ತೀಚೆಗಷ್ಟೇ ಶಿವನ್ ನಿವೃತ್ತರಾದರು.

ಹೊಗಳಿಕೆಯ ಸುರಿಮಳೆ

ಶಿವನ್ ಅವರ ನಿವೃತ್ತಿಯ ನಂತರ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಶಿವನ್ ದಟ್ಟಾರಣ್ಯಗಳ ನಡುವೆ ನಡೆದುಕೊಂಡು ಹೋಗುತ್ತಿರುವ ಚಿತ್ರ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ- “ಪೋಸ್ಟ್ ಮ್ಯಾನ್ ಡಿ ಶಿವನ್ ಅವರು ಪ್ರತಿ ದಿನ ದಟ್ಟಾರಣ್ಯಗಳ ನಡುವೆ 15 ಕಿಮೀ ನಡೆದು ಕೂನೂರಿನ ಹಲವು ದೂರದ ಪ್ರದೇಶಗಳಿಗೆ ಅಂಚೆ ಬಟವಾಡೆ ಮಾಡಿದ್ದಾರೆ. ಆನೆಗಳು, ಕರಡಿಗಳು, ಕಾಡೆಮ್ಮೆಗಳು ಅಟ್ಟಾಡಿಸಿದರೂ ನದಿ ತೊರೆ, ಝರಿಗಳ ಪ್ರದೇಶಗಳನ್ನು ದಾಟಿ ಅವರು 30 ವರ್ಷಗಳ ಕಳೆದ ವಾರ ನಿವೃತ್ತರಾಗುವ ತನಕ ಕಾಲ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ’.

- Advertisement -
spot_img

Latest News

error: Content is protected !!