Wednesday, June 3, 2026
Homeಅಪರಾಧನೆಲ್ಯಾಡಿ: ಆಸ್ತಿ ಕುರಿತ ವೈಷಮ್ಯ- ರೆಖ್ಯದಲ್ಲಿ 40 ವರ್ಷದ ವ್ಯಕ್ತಿಯ ಕಡಿದು ಕೊಲೆ

ನೆಲ್ಯಾಡಿ: ಆಸ್ತಿ ಕುರಿತ ವೈಷಮ್ಯ- ರೆಖ್ಯದಲ್ಲಿ 40 ವರ್ಷದ ವ್ಯಕ್ತಿಯ ಕಡಿದು ಕೊಲೆ

- Advertisement -
- Advertisement -

ನೆಲ್ಯಾಡಿ: ಅವಿವಾಹಿತ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಿದ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೃಷಿಕ ಮತ್ತು ಎಲ್ಐಸಿ ಪ್ರತಿನಿಧಿಯಾಗಿರುವ ಶಾಂತಪ್ಪ ಗೌಡ ದೇವಸ್ಯ (40) ಕೊಲೆಯಾದ ವ್ಯಕ್ತಿ.

ಇದೇ ಪರಿಸರದ ಜಯಚಂದ್ರ ಎಂಬವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜಮೀನು ಕುರಿತ ಮತ್ತು ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

ಕೊಲೆ ನಡೆದ ಸ್ಥಳ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ

- Advertisement -

Latest News

error: Content is protected !!