Wednesday, July 15, 2026
HomeUncategorizedರೆಖ್ಯ: ಶಾಸಕ ಹರೀಶ್ ಪೂಂಜರಿಂದ ನೇಲ್ಯಡ್ಕ ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ

ರೆಖ್ಯ: ಶಾಸಕ ಹರೀಶ್ ಪೂಂಜರಿಂದ ನೇಲ್ಯಡ್ಕ ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ

- Advertisement -
- Advertisement -

ರೆಖ್ಯ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲ್ಯಡ್ಕ ಸರಕಾರಿ ಪ್ರೌಢಶಾಲೆಯ ನೂತನ ಕೊಠಡಿಯ ಶಿಲಾನ್ಯಾಸವನ್ನು ತಾಲೂಕಿನ ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಈ ವಿದ್ಯಾ ದೇಗುಲದ ಪ್ರಾಥಮಿಕ ಶಾಲಾ ವಿಭಾಗ ಸುಮಾರು 65 ವರ್ಷದಿಂದ ಹಳೆಯದಾಗಿದೆ. ಇದೀಗ ಪ್ರೌಢಶಾಲೆಯಲ್ಲಿ 32 ಲಕ್ಷ ರೂ ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಾಣವಾಗಲಿದೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಸದಸ್ಯ ಕೊರಗಪ್ಪ ನಾಯ್ಕ್, ಹತ್ಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧರ್ಮರಾಜ್ ಗೌಡ ಅಡ್ಕಾಡಿ, ಊರಿನ ಹಿರಿಯರಾದ ಶೀನಪ್ಪ ರೈ ಎಂತಿಮಾರು, ಹತ್ಯಡ್ಕ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಬೇಬಿ ಕಿರಣ್, ಬಿಜೆಪಿ ನಿಯೋಜಿತ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ಶಕುಂತಳಾ, ಪಿಡಬ್ಲ್ಯೂಡಿ ಇಂಜಿನಿಯರ್ ಸುಜಿತ್, ಕಾಂಟ್ರಾಕ್ಟರ್ ಅಂಬರೀಷ್,ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪಾ, ನವೀನ್ ಕೆಲೆಂಜಿನೋಡಿ, ಜಯರಾಮ ದೇವಸ್ಯ, ಜನಾರ್ಧನ ದೇವಸ್ಯ, ಕಾರ್ತಿಕ್ ಎಡ್ಮಡ್ಕ, ಮೋಹನ್ ಗೌಡ ಉರ್ನಡ್ಕ, ಲೋಕೇಶ್ ಕೇಲೇಂಜಿನೋಡಿ, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳ ಪೋಷಕರು ಮತ್ತು ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!