Friday, June 28, 2024
Homeತಾಜಾ ಸುದ್ದಿNDA ಸರ್ಕಾರ ವರ್ಷದೊಳಗೆ ಪತನವಾಗಲಿದೆ; ಕಾರಣ ಇದೇ ಎಂದ ಸಂಸದ ಸಂಜಯ್ ಸಿಂಗ್

NDA ಸರ್ಕಾರ ವರ್ಷದೊಳಗೆ ಪತನವಾಗಲಿದೆ; ಕಾರಣ ಇದೇ ಎಂದ ಸಂಸದ ಸಂಜಯ್ ಸಿಂಗ್

spot_img
- Advertisement -
- Advertisement -

ನವದೆಹಲಿ: ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪತನಗೊಳ್ಳಲಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ, 72 ಸದಸ್ಯರ ಯೂನಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್‌ಗಳ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಸರಕಾರ ರಚಿಸಿದ ಬಗ್ಗೆ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಸಂಜಯ್ ಸಿಂಗ್, ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಒಂದು ವರ್ಷದಲ್ಲಿ ಪತನವಾಗಲಿದೆ. ಮೋದಿ ಸರ್ಕಾರ ಎನ್‌ಡಿಎ ಘಟಕಗಳ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗುವ ಎಲ್ಲಾ ಸಾಧ್ಯತೆಯಿದೆ,’ ಎಂದು ಹೇಳಿದ್ದಾರೆ.

“ಮತದಾರರ ನಿರೀಕ್ಷೆಗೆ ತಕ್ಕಂತೆ ಪ್ರಧಾನಿ ಮೋದಿ ಅವರು ಕೆಲಸಗಳನ್ನು ಮಾಡಲು ಹೋಗುತ್ತಿಲ್ಲ. ಬದಲಾಗಿ ರಾಜಕೀಯ ಪಕ್ಷಗಳನ್ನು ಒಡೆಯುವ ತಮ್ಮ ಧೋರಣೆಯನ್ನು ಮುಂದುವರಿಸುತ್ತಾರೆ” ಎಂದು ಹೇಳಿದ ಸಿಂಗ್ ಟಿಡಿಪಿ ಮತ್ತು ಜೆಡಿಯುಗೆ ನಾನು ಹೇಳಬಯಸುತ್ತೇನೆ, ನೀವೇ ಸ್ಪೀಕರ್ ಮಾಡಿ, ಇಲ್ಲದಿದ್ದರೆ ನಿಮ್ಮ ಪಕ್ಷದ ಎಷ್ಟು ಸಂಸದರು ಬಿಜೆಪಿ ಸೇರುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಅವರು ಹೇಳಿದರು.

- Advertisement -
spot_img

Latest News

error: Content is protected !!