Saturday, April 20, 2024
Homeತಾಜಾ ಸುದ್ದಿಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮನೆ ಮೇಲೆ ಎನ್ ಸಿಬಿ ದಾಳಿ: ಡ್ರಗ್ಸ್ ವಶಪಡಿಸಿಕೊಂಡ...

ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮನೆ ಮೇಲೆ ಎನ್ ಸಿಬಿ ದಾಳಿ: ಡ್ರಗ್ಸ್ ವಶಪಡಿಸಿಕೊಂಡ ಅಧಿಕಾರಿಗಳು

spot_img
- Advertisement -
- Advertisement -

ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತ ಹಾಸ್ಯನಟಿ ಭಾರತಿ ಸಿಂಗ್ ಅವರ ಮನೆಯ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಮುಂಬೈನ ಅಂಧೇರಿಯಲ್ಲಿರುವ ಭಾರ್ತಿಯವರ ನಿವಾಸದ ಮೇಲೆ ದಾಳಿ ನಡೆಸಿದೆ. ಅವರು ಪತಿ ಹರ್ಷ್ ಲಿಂಬಾಚಿಯಾ ಅವರೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ.

ಎನ್‌ಸಿಬಿ ಅಧಿಕಾರಿಗಳು ಇಂದು ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಿಂದ ಅಲ್ಪ ಪ್ರಮಾಣದ ಡ್ರಗ್ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವು ಮಾದಕವಸ್ತುಗಳೇ ಅಥವಾ ನಿಗದಿತ ಔಷಧಿಗಳೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ನಟ ಅರ್ಜುನ್ ರಾಂಪಾಲ್ ಅವರ ನಿವಾಸದಲ್ಲಿ ಎನ್‌ಸಿಬಿ ದಾಳಿ ನಡೆಸಿತ್ತು. ಕಳೆದ ತಿಂಗಳು, ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್‌ನ ಸಹೋದರ ಅಗಿಸಿಯಾಲೋಸ್ ಡೆಮೆಟ್ರಿಯೇಡ್ಸ್‌ನನ್ನು ಮತ್ತೊಂದು ಮಾದಕವಸ್ತು ಪ್ರಕರಣದಲ್ಲಿ ಎನ್‌ಸಿಬಿ ಬಂಧಿಸಿತ್ತು. ನಿಷೇಧಿತ ಮಾದಕ ದ್ರವ್ಯಗಳಾದ ಹಶಿಶ್ ಮತ್ತು ಆಲ್‌ಪ್ರಜೋಲಮ್ ಮಾತ್ರೆಗಳನ್ನು ಎನ್‌ಸಿಬಿ ಅವರಿಂದ ವಶಪಡಿಸಿಕೊಂಡಿತ್ತು.

- Advertisement -
spot_img

Latest News

error: Content is protected !!