Tuesday, April 30, 2024
Homeಆರಾಧನಾಬೆಳ್ತಂಗಡಿ : ಇಂದಿನಿಂದ ಸವಣಾಲು ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ!

ಬೆಳ್ತಂಗಡಿ : ಇಂದಿನಿಂದ ಸವಣಾಲು ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ!

spot_img
- Advertisement -
- Advertisement -

ಬೆಳ್ತಂಗಡಿ : ಸವಣಾಲು ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ವು ಅಕ್ಟೋಬರ್ 07 ರ ಗುರುವಾರದಿಂದ 15 ನೇ ಶುಕ್ರವಾರದವರೆಗೆ ನಡೆಯಲಿದೆ. ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ಅಕ್ಟೋಬರ್ 15 ರಂದು ಶುಕ್ರವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿದೆ.

ಅಕ್ಟೋಬರ್ 12 ರಿಂದ 14ರವರೆಗೆ ಅಕ್ಷರಭ್ಯಾಸ ( ಬೆಳಿಗ್ಗೆ 09.00 ರಿಂದ 11.00 ಗಂಟೆಯ ವರೆಗೆ ) ನಡೆಯಲಿದೆ.13 ರ ಬುಧವಾರದಂದು ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು.
ಅಕ್ಟೋಬರ್ 14ರ ಗುರುವಾರದಂದು ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.15ರ ಶುಕ್ರವಾರದಂದು ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು.

ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸನ್ನು ಧರಿಸಿ, ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!