Saturday, April 27, 2024
Homeತಾಜಾ ಸುದ್ದಿವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ನಾಮಕರಣ:ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಪ್ರಧಾನಿ...

ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ನಾಮಕರಣ:ಆಗಸ್ಟ್ 23 ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಪ್ರಧಾನಿ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಇಸ್ರೋ ಉಡ್ಡಯನ ಮಾಡಿರುವ ಚಂದ್ರಯಾನ 3 ನಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಿರುವ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಡಲಾಗಿದೆ.‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ನೆಟ್‌ವರ್ಕ್ ಸೆಂಟರ್ ನಲ್ಲಿ ವಿಜ್ಞಾನಿಗಳೊಂದಿಗೆ ಸಂವಾದದ ವೇಳೆ ಈ ಘೋಷಣೆ ಮಾಡಿದ್ದಾರೆ.ಇನ್ನು ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಇಳಿದ ದಿನವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಪ್ರಧಾನಿ ಇಂದು ಘೋಷಣೆ ಮಾಡಿದ್ದಾರೆ.

ಚಂದ್ರಯಾನ 1 ರಲ್ಲಿ ಲ್ಯಾಂಡ್ ಆಗಿದ್ದ ಸ್ಥಳಕ್ಕೆ ನೆಹರು ಪಾಯಿಂಟ್ ಮತ್ತು ಚಂದ್ರಯಾನ 2 ರಲ್ಲಿ ಕ್ರ್ಯಾಶ್ ಆಗಿದ್ದ ಸ್ಥಳಕ್ಕೆ ತಿರಂಗ ಪಾಯಿಂಟ್ ಎಂದು ಹೆಸರಿಡಲಾಗಿತ್ತು.

ಈ ಮಧ್ಯೆ ಇಸ್ರೋ ಕಚೇರಿಯಲ್ಲಿ ಇಂದು ಪ್ರಧಾನಿ ಅವರಿಗೆ ವಿಕ್ರಂ ಲ್ಯಾಂಡರ್ ಪ್ರತಿರೂಪ ಮತ್ತು ಪ್ರಜ್ಞಾನ್ ರೋವರ್ ಕಳುಹಿಸಿದ ಮೊದಲ ಫೋಟೋ ಅನ್ನು ಇಸ್ರೋ ಅಧ್ಯಕ್ಷ ಸೋಮನಾಥ್ ಉಡುಗೊರೆಯಾಗಿ ನೀಡಿದರು.

- Advertisement -
spot_img

Latest News

error: Content is protected !!