Saturday, May 4, 2024
Homeಕರಾವಳಿಶಾಲಾ ಪಠ್ಯದಲ್ಲಿ ನಾರಾಯಣ ಗುರು, ಭಗತ್ ಸಿಂಗ್ ವಿಷಯ ಕೈಬಿಟ್ಟಿಲ್ಲ :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ...

ಶಾಲಾ ಪಠ್ಯದಲ್ಲಿ ನಾರಾಯಣ ಗುರು, ಭಗತ್ ಸಿಂಗ್ ವಿಷಯ ಕೈಬಿಟ್ಟಿಲ್ಲ :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು: ಶಾಲಾ ಪಠ್ಯ ಪುಸ್ತಕದಲ್ಲಿ ನಾರಾಯಣ ಗುರು ಮತ್ತು ಭಗತ್ ಸಿಂಗ್ ವಿಷಯವನ್ನು ಕೈಬಿಟ್ಟಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ಶಿಕ್ಷಣ ಸಚಿವರ ಜೊತೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ, ಸಮಾಜದಲ್ಲಿದ್ದ ವಿಷಯವನ್ನು ಕನ್ನಡಕ್ಕೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಪಠ್ಯದಲ್ಲಿ ಹೆಡಗೇವಾರ್ ಅವರ ವಿಚಾರ ಪಠ್ಯದಲ್ಲಿ ಸೇರಿಸಿರುವುದಕ್ಕೆ ತಪ್ಪೇನಿದೆ ಎಂದು ಪ್ರಶ್ನಿಸಿರುವ ಸಚಿವ ಸುನೀಲ್ ಕುಮಾರ್, ದೇಶದ ಸ್ವಾಭಿಮಾನ, ಶೌರ್ಯದ ಬಗ್ಗೆ ಹೇಳಬೇಕು ಅನ್ನೋದು ಮೊದಲಿನಿಂದಲೂ ನಮ್ಮ ವಾದ, ಮೆಕಾಲೆ ಶಿಕ್ಷಣ ಬಿಟ್ಟು, ಭಾರತದ ಶಿಕ್ಷಣ ಇರಬೇಕು ಎಂದು ಹೇಳಿದ್ದಾರೆ.

ಭಾರತದ ಶಿಕ್ಷಣ ನಮಗೆ ಬೇಕಿದ್ದು,ತಜ್ಞರ ಸಮಿತಿ ಇದನ್ನು ಒಪ್ಪಿದ್ದು ಪಠ್ಯಕ್ಕೆ ಅಳವಡಿಸಲಾಗಿದೆ ಎಂದು ಹೇಳಿರುವ ಸುನೀಲ್ ಕುಮಾರ್,
ಇಂದು ಹೆಡಗೇವಾರ್ ಪ್ರೇರಣೆಯಿಂದ ದೇಶದ ಪರ ಕೆಲಸ ಕಾರ್ಯ ಮಾಡಲಾಗ್ತಿದೆ ಎಂದಿದ್ದಾರೆ .

- Advertisement -
spot_img

Latest News

error: Content is protected !!