ಬೆಳ್ತಂಗಡಿ: ನಾರಾವಿ ಗ್ರಾಮದ ರಾಜ್ಯ ಹೆದ್ದಾರಿ ಸಮೀಪ ನಾರಾವಿ ಗ್ರಾಮ ಪಂಚಾಯತ್‌ನಿಂದ 94C ಅಡಿಯಲ್ಲಿ ಜಾಗ ಮಂಜೂರು ಮಾಡಿಸಿಕೊಂಡು ವ್ಯಾಪಾರ ಪರವಾನಿಗೆ ಪಡೆಯದೇ ಹೋಟೇಲು ಉದ್ಯಮ ಹಾಗೂ ಕೊಳವೆ ಬಾವಿ ನಿರ್ಮಿಸಿರುವ ದೂರಿನ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಸನತ್ ಕುಮಾರ್ ಹೆಗ್ಡೆ ಎಂಬವರು ಫೆ.6ರಂದು ಮಂಗಳೂರು ಲೋಕಾಯುಕ್ತರಿಗೆ ದೂರು ನೀಡಿದ್ದು. ಲೋಕಾಯುಕ್ತ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ವಜ್ರನಾಭ ಎಂಬವರು ಕೆಲವು ವರ್ಷಗಳಿಂದ ಹೋಟೇಲು ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಈ ವಾಣಿಜ್ಯ ಉದ್ಯಮಕ್ಕಾಗಿ ನಾರಾವಿ ಗ್ರಾಮ ಪಂಚಾಯತ್‌ನಿಂದ ಪರವಾನಿಗೆಯನ್ನು ಪಡೆದುಕೊಂಡಿಲ್ಲ, ಈ ಬಗ್ಗೆ ಗ್ರಾಮ ಪಂಚಾಯತ್‌ಗೆ, ಬೆಳ್ತಂಗಡಿ ಕಾರ್ಯನಿರ್ವಹಣಾಧಿಕಾರಿಯವರಿಗೆ, ಬೆಳ್ತಂಗಡಿ ತಾಲೂಕು ತಹಶೀಲ್ದಾರರಿಗೆ, ಪುತ್ತೂರು ಸಹಾಯಕ ಕಮೀಷನರವರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು ಈ ದೂರುಗಳಿಗೆ ಯಾವುದೇ ಸಮಂಜಸ ಕ್ರಮ ಜರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕ್ರಮ ಕೈಗೊಳ್ಳದ ಆರು ಅಧಿಕಾರಿಗಳಾದ ನಾರವಿ ಗ್ರಾಮ ಪಂಚಾಯತ್ ಅಧ್ಯಕ್ಷ , ನಾರವಿ ಪಿಡಿಓ ,ಬೆಳ್ತಂಗಡಿ ತಹಶಿಲ್ದಾರ್, ತಾಲೂಕು ಪಂಚಾಯತ್ ಇಓ, ಎಸಿ ಪುತ್ತೂರು, ಜಿಲ್ಲಾಧಿಕಾರಿ ಮೇಲೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.