Sunday, April 28, 2024
Homeತಾಜಾ ಸುದ್ದಿಗ್ರಾಹಕರಿಗೆ ಮತ್ತೆ ಬಿಗ್‌ ಶಾಕ್‌ ನೀಡಿದ ಕೆಎಂಎಫ್; ಜಂಬೋ ಪ್ಯಾಕೆಟ್ ಹಾಲಿನ ದರ 3 ರೂ...

ಗ್ರಾಹಕರಿಗೆ ಮತ್ತೆ ಬಿಗ್‌ ಶಾಕ್‌ ನೀಡಿದ ಕೆಎಂಎಫ್; ಜಂಬೋ ಪ್ಯಾಕೆಟ್ ಹಾಲಿನ ದರ 3 ರೂ ಹೆಚ್ಚಳ

spot_img
- Advertisement -
- Advertisement -

ಬೆಂಗಳೂರು: ಕೆಎಂಎಫ್ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಜಂಬೋ ಪ್ಯಾಕೆಟ್ ಹಾಲಿನ ದರ 231 ರೂ.ಯಿಂದ 234‌ ರೂ.ಗೆ ಹೆಚ್ಚಳವಾಗಲಿದೆ. ಈ ಪರಿಷ್ಕೃತ ಜಂಬೋ ಪ್ಯಾಕೆಟ್ ಹಾಲಿನ ದರ ಇಂದಿನಿದಂಲೇ ಜಾರಿಯಾಗಲಿದೆ. ಈ ಬಗ್ಗೆ ಕೆಎಂಎಫ್​​​ ಅಂಗ ಸಂಸ್ಥೆ ಬಮೂಲ್ ಮೂಲಕ ಪ್ರಕಟಣೆ ಹೊರಡಿಸಿದೆ.

ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ. ಈಗಾಗಲೇ ಬೆಲೆ ಮುದ್ರಿತ ಪ್ಯಾಕೆಟ್​ಗಳು​ ಹಳೇ ಬೆಲೆಯಲ್ಲಿಯೇ ಮಾರಾಟ ಮಾಡಬೇಕು ಎಂದು ರಿಟೇಲ್, ಫ್ರಾಂಚೈಸಿ, ಔಟ್​ಲೆಟ್​ದಾರರಿಗೆ ಬಮೂಲ್ ಪ್ರಕಟಣೆ ಮೂಲಕ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ ನಲ್ಲಿ ಹಾಲು ಒಕ್ಕೂಟ ಪ್ರತಿ ಲೀಟರ್‍‌ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿತ್ತು. ಇದೀಗ ಕೆಎಂಎಫ್ 6‌ ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರವನ್ನು ಹೆಚ್ಚಳ ಮಾಡಿದೆ. ಇದರಿಂದ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ.

- Advertisement -
spot_img

Latest News

error: Content is protected !!