Tuesday, July 14, 2026
Homeಕರಾವಳಿಮಂಗಳೂರುಮಂಗಳೂರು: ರಸ್ತೆಯಲ್ಲೇ ನಡೆದ ನಮಾಜ್; ವೀಡಿಯೋ ವೈರಲ್

ಮಂಗಳೂರು: ರಸ್ತೆಯಲ್ಲೇ ನಡೆದ ನಮಾಜ್; ವೀಡಿಯೋ ವೈರಲ್

- Advertisement -
- Advertisement -

ಮಂಗಳೂರು: ವಾಹನ ಸಂಚಾರವಿರುವ ರಸ್ತೆಯಲ್ಲಿ ಹಗಲು ಸಮಯದಲ್ಲಿ ಯುವಕರು ನಮಾಜ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಂಕನಾಡಿಯಲ್ಲಿ ಮಸೀದಿ ಮುಂಭಾಗ ಇರುವ ರಸ್ತೆಯಲ್ಲೇ ಯುವಕರ ತಂಡದಿಂದ ನಮಾಜ್ ನಡೆದಿದೆ ಎಂದು ಹೇಳಲಾಗಿದೆ.ಎರಡು ಮೂರು ದಿನಗಳ ಹಿಂದೆ ನಡೆದಿರುವ ನಮಾಜ್ ಎನ್ನಲಾಗಿದ್ದು, ನಮಾಜ್ ಮಾಡುತ್ತಿರುವ ದೃಶ್ಯಾವಳಿಗಳು ಈಗ ವೈರಲ್ ಆಗಿವೆ.

ರಸ್ತೆಯಲ್ಲೇ ನಮಾಜ್ ನಡೆಯುತ್ತಿದ್ದ ಕಾರಣ ವಾಹನಗಳು ಯೂ ಟರ್ನ್ ತೆಗೆದುಕೊಂಡು ವಾಪಾಸಾಗಿದ್ದು, ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!