Friday, July 12, 2024
Homeಕರಾವಳಿಮಂಗಳೂರುನನಗೆ ಮಂಜುನಾಥ ಸ್ವಾಮಿಯ ಮೇಲೆ ನಂಬಿಕೆ ಇದೆ; ಧರ್ಮಸ್ಥಳದಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹೇಳಿಕೆ

ನನಗೆ ಮಂಜುನಾಥ ಸ್ವಾಮಿಯ ಮೇಲೆ ನಂಬಿಕೆ ಇದೆ; ಧರ್ಮಸ್ಥಳದಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹೇಳಿಕೆ

spot_img
- Advertisement -
- Advertisement -

ಧರ್ಮಸ್ಥಳ: ನಾನು ಮಂಜುನಾಥ ಸ್ವಾಮಿಯ ಭಕ್ತನಾಗಿದ್ದು, ಯಾವಾಗಲೂ ದರುಶನಕ್ಕೆ ಬರುತ್ತೇನೆ ಎಂದು ಮಾಜಿ ಸಚಿವ ಮತ್ತು ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಇಂದು ಮಂಜುನಾಥಸ್ವಾಮಿಗೆ ಸರ್ವ ಸೇವೆ ಪೂಜೆ ಸಲ್ಲಿಕೆ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ ಬಳಿಕ ಮಾತನಾಡಿದ ರೇವಣ್ಣ, ರಾಜ್ಯದಲ್ಲಿ 40 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದು,
25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕಾನೂನಿನ ಬಗ್ಗೆ ಗೌರವ ಮತ್ತು ದೇವರ ಬಗ್ಗೆ ನಂಬಿಕೆ ಇದ್ದು, ತಮ್ಮ ಮೇಲಿನ ಪ್ರಕರಣಗಳು‌ ನ್ಯಾಯಾಲಯದಲ್ಲಿರುವುದರಿಂದ ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ರೇವಣ್ಣ, ಮಂಜುನಾಥ ಸ್ವಾಮಿ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಅಲ್ಲದೇ ಇಂದು ಸೋಮವಾರವಾಗಿರುವುದರಿಂದ ವಿಶೇಷ ದಿನ ಮಂಜುನಾಥ ಸ್ವಾಮಿಯ ದರ್ಶನ‌ ಮಾಡಿ ಪೂಜೆ ಸಲ್ಲಿಸಿರುವುದಾಗಿಯೂ ಧರ್ಮಸ್ಥಳಲ್ಲಿ ಹೆಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
spot_img

Latest News

error: Content is protected !!