Thursday, May 2, 2024
Homeತಾಜಾ ಸುದ್ದಿರಾಹುಲ್ ಗಾಂಧಿಗೆ ಮಕ್ಕಳಾಗಲ್ಲ ಅಂತಾ ಅನ್ನಿಸಿದೆ, ಹಾಗಾಗಿ ಅವರು ಮದುವೆಯಾಗಿಲ್ಲ; ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ...

ರಾಹುಲ್ ಗಾಂಧಿಗೆ ಮಕ್ಕಳಾಗಲ್ಲ ಅಂತಾ ಅನ್ನಿಸಿದೆ, ಹಾಗಾಗಿ ಅವರು ಮದುವೆಯಾಗಿಲ್ಲ; ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

spot_img
- Advertisement -
- Advertisement -

ರಾಮನಗರ : ಪದೇ ಪದೇ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮನಗರದ ಬಿಡದಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ನಳೀನ ಕುಮಾರ್ ಕಟೀಲ್ ದೇಶದಲ್ಲಿ ಕೊರೊನಾ ಬಂದಾಗ ಪ್ರಧಾನಿ ಮೋದಿಯವರ ಪ್ರೇರಣೆಯಿಂದ ಲಸಿಕೆ ಕಂಡು ಹಿಡಿಯಲಾಗಿತ್ತು.

ನಂತರ ಪ್ರಧಾನಿ ಮೋದಿ ಲಸಿಕೆ ಪಡೆದರು. ಸಿದ್ದರಾಮಯ್ಯ ಅವರೆಲ್ಲಾ ಲಸಿಕೆ ಪಡೆದ್ರೆ ಮಕ್ಕಳಾಗಲ್ಲ ಎಂದು ಹೇಳಿಕೊಂಡು ತಿರುಗಿದ್ರು, ನಂತರ ರಾತ್ರಿ ಕದ್ದು ಹೋಗಿ ಲಸಿಕೆ ಹಾಕಿಸಿಕೊಂಡರು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಡಿ, ಮಕ್ಕಳಾಗಲ್ಲ ಎಂದು ಕಾಂಗ್ರೆಸ್ ನವರು ಹೇಳಿಕೊಂಡಿದ್ದರು. ರಾಹುಲ್ ಗಾಂಧಿ ರಾತ್ರಿ ಹೋಗಿ ಲಸಿಕೆ ತೆಗೆದುಕೊಂಡ್ರಲ್ಲ, ಅವರಿಗೆ ಮಕ್ಕಳಾಗಲ್ಲ ಎಂದು ಅನಿಸಿದೆ. ಹಾಗಾಗಿ ರಾಹುಲ್ ಗಾಂಧಿ ಮದುವೆ ಆಗಿಲ್ಲ ಎಂದು ಕಟೀಲ್ ಹೇಳಿಕೆ ನೀಡಿದ್ದಾರೆ. ಕಟೀಲ್ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -
spot_img

Latest News

error: Content is protected !!