- Advertisement -
![]()
- Advertisement -
ಉಡುಪಿ: ಕಾಪು ತಾಲೂಕಿನ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಹಾಲು ಎರೆದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗಿದೆ.
ಮಜೂರು ಗೋವರ್ಧನ ಭಟ್ ಅವರು ಪ್ರತೀ ವರ್ಷ ತಮ್ಮ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವುಗಳಿಗೆ ಹಾಲು ಎರೆದು ನಾಗರ ಪಂಚಮಿ ಆಚರಿಸುತ್ತಾರೆ.
ಗಾಯಾಳು ಮತ್ತು ಅಸ್ವಸ್ಥ ನಾಗರಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡುವ ಅವರು ಗುಣಮುಖವಾದ ಹಾವುಗಳನ್ನು ಮರಳಿ ಕಾಡು, ಬನಕ್ಕೆ ಬಿಡುತ್ತಾರೆ.
ಗೋವರ್ಧನ ಭಟ್ ಅವರು ನಡೆಸುವ ಈ ಪುಣ್ಯ ಕಾರ್ಯದಲ್ಲಿ ಮನೆಮಂದಿಯೂ ಕೈ ಜೋಡಿಸುವುದು ವಿಶೇಷವಾಗಿದೆ.
- Advertisement -


