Sunday, June 23, 2024
Homeಕರಾವಳಿಬೆಳ್ತಂಗಡಿಯಲ್ಲಿ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಕೆ; ನಾಲ್ಕು ಹೊಸ ಬೆಡ್ ತರಿಸಿಕೊಂಡ ಐಟಿ ಅಧಿಕಾರಿಗಳು

ಬೆಳ್ತಂಗಡಿಯಲ್ಲಿ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಕೆ; ನಾಲ್ಕು ಹೊಸ ಬೆಡ್ ತರಿಸಿಕೊಂಡ ಐಟಿ ಅಧಿಕಾರಿಗಳು

spot_img
- Advertisement -
- Advertisement -

ಬೆಳ್ತಂಗಡಿ : ಏಕಕಾಲದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಆಭರಣ ಜ್ಯುವೆಲರಿ ಸಂಸ್ಥೆ ಮೇಲೆ ಐಟಿ ಅಧಿಕಾರಿಗಳು ಅ.31 ರಂದು ಬೆಳಗ್ಗೆ ದಾಳಿ ನಡೆಸಿದ್ದು. ತನಿಖೆ ಇನ್ನೂ ಮುಂದುವರಿಸಿದ್ದಾರೆ. ರಾತ್ರಿ ನಾಲ್ಕು ಜನ ಶಾಪ್ ನಲ್ಲಿ ಮಲಗಲು ಬೆಡ್ ಖರೀದಿಸಿ ತರಿಸಿಕೊಂಡಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಭರಣಿ ಕಟ್ಟದಲ್ಲಿರುವ ಆಭರಣ ಜ್ಯುವೆಲರಿ ಶಾಪ್ ಮೇಲೂ ಮೊದಲು ನಾಲ್ಕು ಜನ ಐಟಿ ಅಧಿಕಾರಿಗಳು ಇನೋವಾ ಕಾರಿನಲ್ಲಿ ಬಂದು ದಾಳಿ ಮಾಡಿದ್ದರು. ನಂತರ ಇನ್ನೊಂದು ಇನೋವಾ ಕಾರಿನಲ್ಲಿ ಬಂದ ಐದು ಜನ ಐಟಿ ಅಧಿಕಾರಿಗಳು ಸೇರಿ ಒಟ್ಟು 9 ಜನ ಕಾರ್ಯಾಚರಣೆ ಮುಂದುವರಿಸಿದ್ದರು.

ಬೆಳಗ್ಗೆಯಿಂದ ಸಂಜೆವರೆಗೆ ಶಾಪ್ ನಲ್ಲಿ ಇರಿಸಿದ್ದ ಚಿನ್ನಾಭರಣ ಲೆಕ್ಕಾಚಾರ ಮಾಡಿದ್ದು‌. ನಂತರ ಗ್ರಾಹಕರಿಗೆ ನೀಡಿದ ಚಿನ್ನಾಭರಣ ದಾಖಲೆಗಳನ್ನು ಪರಿಶೀಲನೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ಸಂಸ್ಥೆಯ 12 ಸಿಬ್ಬಂದಿಗಳನ್ನು ಒಳಗಡೆ ಕುರಿಸಿದ್ದ ಅಧಿಕಾರಿಗಳು ಸಂಜೆ ವೇಳೆಗೆ ಮೊಬೈಲ್ ವಶಕ್ಕೆ ಪಡೆದು ಮನೆಗೆ ಕಳುಹಿಸಿಕೊಟ್ಟಿದ್ದಾರೆ‌. ಆದರೆ ತನಿಖೆ ಇನ್ನೂ ಇರುವುದರಿಂದ ಅಧಿಕಾರಿಗಳು ರಾತ್ರಿ ವೇಳೆಗೆ ನಾಲ್ಕು ಬೆಡ್ ಗಳನ್ನು ಹೊಸದಾಗಿ ಖರೀದಿ ಮಾಡಿ ತರಿಸಿಕೊಂಡಿದ್ದು ಇದರಲ್ಲಿ ಇಬ್ಬರು ಐಟಿ ಅಧಿಕಾರಿಗಳು ಮತ್ತು ಇಬ್ಬರು ಆಭರಣ ಸಂಸ್ಥೆಯ ಸಿಬ್ಬಂದಿಗಳು ಮಲಗಲಿದ್ದಾರೆ. ಬಾಕಿ ಉಳಿದ ಐಟಿ ಅಧಿಕಾರಿಗಳು ಉಜಿರೆ ಖಾಸಗಿ ಲಾಡ್ಜ್ ನಲ್ಲಿ ಉಳಿಯಲಿದ್ದಾರೆ‌. ನಾಳೆ ಮತ್ತೆ ದಾಳಿ ಮುಂದುವರಿಯಲಿದೆ ಎಂದು ಐಟಿ ಇಲಾಖೆಯ ಮೂಲಗಳು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ತಿಳಿಸಿದೆ.

- Advertisement -
spot_img

Latest News

error: Content is protected !!