Friday, June 5, 2026
Homeಕರಾವಳಿಮಂಗಳೂರುಭಾರೀ ಮಳೆಗೆ ಕಲ್ಲಡ್ಕದಲ್ಲಿ ರಸ್ತೆ ಮೇಲೆಯೇ ಹರಿದ ನೀರು; ಡಿಸಿ ಸ್ಥಳ ಪರಿಶೀಲಿಸಿದರೂ ಸರಿಯಾಗದ ಸಮಸ್ಯೆ

ಭಾರೀ ಮಳೆಗೆ ಕಲ್ಲಡ್ಕದಲ್ಲಿ ರಸ್ತೆ ಮೇಲೆಯೇ ಹರಿದ ನೀರು; ಡಿಸಿ ಸ್ಥಳ ಪರಿಶೀಲಿಸಿದರೂ ಸರಿಯಾಗದ ಸಮಸ್ಯೆ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಲ್ಲಡ್ಕದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅವ್ಯವಸ್ಥೆ ಉಂಟಾಗಿದೆ.

ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ
ರಸ್ತೆಯಲ್ಲೇ ಮಳೆ ನೀರು ಹರಿದಿದೆ.ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ವಾಹನ ಸವಾರರ ಪರದಾಟ ನಡೆಸುವಂತಾಗಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಸ್ವತ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ಹರಿಯಲು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದರು.

ಆದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೂ ಅಗತ್ಯ ಕ್ರಮ ಕೈಗೊಳ್ಳದೇ ಪಾದಾಚಾರಿಗಳು ಮತ್ತು ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

- Advertisement -

Latest News

error: Content is protected !!