Monday, May 19, 2025
Homeಅಪರಾಧವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ; ತಮಾಷೆಗಾಗಿ ಇ-ಮೇಲ್ ಕಳುಹಿಸಿದ್ದೆ ಎಂದ ಬಾಲಕ

ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ; ತಮಾಷೆಗಾಗಿ ಇ-ಮೇಲ್ ಕಳುಹಿಸಿದ್ದೆ ಎಂದ ಬಾಲಕ

spot_img
- Advertisement -
- Advertisement -

ನವದೆಹಲಿ: ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಜೂನ್‌ 18ರಂದು ಬಾಂಬ್‌ ಬೆದರಿಕೆ ಹಾಕಿದ್ದ ಆರೋಪದಡಿ 13 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆಯ ಇ– ಮೇಲ್‌ ಬಂದಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇ– ಮೇಲ್‌ ಕಳುಹಿಸಿದ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು 13 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂದು ತಿಳಿದು ಬಂದಿದೆ.

‘ನಾನು ಈ ಹಿಂದೆ ಇದೇ ರೀತಿಯ ಹುಸಿ ಬಾಂಬ್‌ ಬೆದರಿಕೆಯ ಸುದ್ದಿಯನ್ನು ನೋಡಿದ್ದೆ. ಹೀಗಾಗಿ ನಾನು ಕೇವಲ ತಮಾಷೆಗಾಗಿ ಈ ರೀತಿ ಇ– ಮೇಲ್‌ ಕಳುಹಿಸಿದ್ದೆ‘ ಎಂದು ಆರೋಪಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.

ಇ– ಮೇಲ್‌ ಕಳುಹಿಸಿದ ಬಳಿಕ ಮೇಲ್‌ ಐಡಿಯನ್ನು ಡಿಲೀಟ್‌ ಮಾಡಿದ್ದೆ. ಭಯಪಟ್ಟು ಈ ಬಗ್ಗೆ ಪೋಷಕರ ಬಳಿ ಏನನ್ನು ಹೇಳಿಕೊಂಡಿಲ್ಲ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!