Sunday, June 16, 2024
Homeಕರಾವಳಿಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಂದ 4 ಜನ ಅಡಿಕೆ ಕಳ್ಳರ ಬಂಧನ; ಆರೋಪಿಗಳಿಂದ ಸುಮಾರು 4...

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಂದ 4 ಜನ ಅಡಿಕೆ ಕಳ್ಳರ ಬಂಧನ; ಆರೋಪಿಗಳಿಂದ ಸುಮಾರು 4 ಲಕ್ಷ್ಮ ಮೌಲ್ಯದ ಸೊತ್ತು ವಶ

spot_img
- Advertisement -
- Advertisement -

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ, ಪುತ್ತೂರು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿ, ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ, ಸುಮಾರು 23 ಗೋಣಿ ಸುಲಿಯದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ  ದಿನಾಂಕ 26.10.2023 ರಂದು ಅ.ಕ್ರ. 105/2023 ಕಲಂ:454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದ ತನಿಖಾ ತಂಡದ ಕಾರ್ಯಾಚರಣೆಯಲ್ಲಿ 2023 ಅ. 31  ರಂದು ಆರೋಪಿಗಳಾದ, ಪುತ್ತೂರು ತಾಲೂಕಿನ ಶ್ರವಣ್ ಕೆ, ಜಯಚಂದ್ರ, ಅಶೋಕ,  ಪುನೀತ್ ಅವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಸುಮಾರು ರೂ 1,55,925/-  ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. 

- Advertisement -
spot_img

Latest News

error: Content is protected !!