Thursday, June 4, 2026
Homeತಾಜಾ ಸುದ್ದಿಸಿದ್ದರಾಮಯ್ಯ ಅವರು ಸಿಎಂ ಆದ್ರೆ ಅವರಿಗೆ ಬೆಂಬಲನೀಡ್ತೀನಿ; ಕೆ.ಆರ್.ಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಘೋಷಣೆ

ಸಿದ್ದರಾಮಯ್ಯ ಅವರು ಸಿಎಂ ಆದ್ರೆ ಅವರಿಗೆ ಬೆಂಬಲನೀಡ್ತೀನಿ; ಕೆ.ಆರ್.ಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಘೋಷಣೆ

- Advertisement -
- Advertisement -

ರಾಯಚೂರು : ಸಿದ್ದರಾಮಯ್ಯ ಅವರು ಸಿಎಂ ಆದ್ರೆ ಅವರಿಗೆ ಬೆಂಬಲ ನೀಡ್ತೀನಿ ಎಂದು ಕೆ.ಆರ್.ಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ.

ರಾಯಚೂರಿನ ಲಿಂಗಸುಗೂರಿನಲ್ಲಿ ಕೆಆರ್‍ ಪಿ ಪಕ್ಷದ ಅಭ್ಯರ್ಥಿ ಆರ್.ರುದ್ರಯ್ಯ ಪರ ಪ್ರಚಾರ ವೇಳೆ ಭಾಷಣ ಮಾಡಿದ ಅವರು.ಕೆ.ಆರ್.ಪಿ  ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನ ಒಪ್ಪಿದರೆ ಹಾಗೂ ನನ್ನ ಜೊತೆ ಭರವಸೆ ಪೂರೈಸುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರೆ, ಅವರು ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅವರಿಗೆ ನಾನು ಬೆಂಬಲ ನೀಡ್ತಿನಿ ಅಂತ ಹೇಳಿದರು.

ಇದೇ ವೇಳೆ ಅವರು, ಬಿಜೆಪಿ ನಾಯಕರಿಂದಲೇ ದೇಶದ ರಕ್ಷಣೆಯಾಗುತ್ತೆ ಅನ್ನೋ ರೀತಿ ಮಾತನಾಡುತ್ತಾರೆ. ಬಿಜೆಪಿ ದೊಡ್ಡದೊಡ್ಡ ನಾಯಕರು ದೆಹಲಿಯಿಂದ ಬಂದು ಮಾತನಾಡುತ್ತಿದ್ದಾರೆ ಅಂಥ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರನ್ನು ವ್ಯಂಗ್ಯ ಮಾಡಿದರು. ಯಾವುದೇ ಕಾರಣಕ್ಕೂ ನಿಮ್ಮ ಆಟ ನಡೆಯಲ್ಲ ಎಂದು ಕಿಡಿಕಾರಿದರು

- Advertisement -

Latest News

error: Content is protected !!