Friday, May 17, 2024
Homeತಾಜಾ ಸುದ್ದಿಗಂಡನ ಮೃತದೇಹದ ಮುಂದೆಯೇ ಅಳುತ್ತಾ ಸಾವನ್ನಪ್ಪಿದ ಪತ್ನಿ

ಗಂಡನ ಮೃತದೇಹದ ಮುಂದೆಯೇ ಅಳುತ್ತಾ ಸಾವನ್ನಪ್ಪಿದ ಪತ್ನಿ

spot_img
- Advertisement -
- Advertisement -

ಹಾಸನ; ಗಂಡನ ಮೃತದೇಹದ ಮುಂದೆಯೇ ಅಳುತ್ತಾ ಪತ್ನಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ.ರವೀಶ್ (39) ಹಾಗೂ ಪ್ರಮೀಳಾ (32) ಮೃತ ದಂಪತಿ.

ನಿನ್ನೆ ರಾತ್ರಿ ರವೀಶ್​ ಹೃದಯಾಘಾತದಿಂದ ಮೃತಪಟ್ಟಿದ್ದರು.ಇಂದು ಬೆಳಗ್ಗೆ ಪತಿಯ ಶವದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಕೊನೆಯುಸಿರೆಳೆದಿದ್ದಾಳೆ.ಇನ್ನು ದಂಪತಿ ಸಾವಿನಲ್ಲೂ ಒಂದಾದರೆ, ಇನ್ನೊಂದೆಡೆ ದಂಪತಿ ಇಬ್ಬರು ಗಂಡು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಶವಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತು. ದಂಪತಿ ಸಾವಿಗೆ ಗ್ರಾಮಸ್ಥರು ಕೂಡ ಕಂಬನಿ ಮಿಡಿದಿದ್ದಾರೆ.

- Advertisement -
spot_img

Latest News

error: Content is protected !!