Thursday, June 4, 2026
Homeಕರಾವಳಿಉಡುಪಿಪರೇಶ್ ಮೆಸ್ತಾ ಸಾವನ್ನು  ಸಹಜ ಸಾವು ಎನ್ನುವುದು ತಪ್ಪು:ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ

ಪರೇಶ್ ಮೆಸ್ತಾ ಸಾವನ್ನು  ಸಹಜ ಸಾವು ಎನ್ನುವುದು ತಪ್ಪು:ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ

- Advertisement -
- Advertisement -

ಉಡುಪಿ: ಹೊನ್ನಾವರದ ಪರೇಶ್ ಮೆಸ್ತ ಸಾವನ್ನು  ಸಹಜ ಸಾವು ಎನ್ನುವುದು ತಪ್ಪು, ಈ ಪ್ರಕ್ರಿಯೆಯಲ್ಲಿ  ಅನ್ಯಾಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ನಾನು ಇದನ್ನು ವಿರೋಧಿಸುತ್ತೇನೆ, ಇದು ಮೋಸ ಮಾಡಿದ ವರದಿ, ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ, ಈಗಿನ ಕೇಂದ್ರ ಸರ್ಕಾರ ಕೇಸ್ ಅನ್ನು ರೀ ಓಪನ್ ಮಾಡಿ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ

ಅಲ್ಲದೇ ರಾಜ್ಯಾದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ, ಇದು ಹಿಂದುತ್ವಕರ ಅನ್ಯಾಯ ಮಾಡಿದ ವರದಿಯಾಗಿದ್ದು, ತಪ್ಪಿತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು ಎಂದು ಮುತಾಲಿಕ್ ಹೇಳಿದ್ದಾರೆ.

- Advertisement -

Latest News

error: Content is protected !!