Saturday, June 6, 2026
Homeಕರಾವಳಿಉಡುಪಿಉಡುಪಿ: ಆಝಾನ್ ಕುರಿತು ಸಂವಿಧಾನದ ವ್ಯಾಪ್ತಿಯಲ್ಲಿ ಮುತಾಲಿಕ್ ಬೇಡಿಕೆ ಈಡೇರಿಸ್ತೇವೆ: ನಳಿನ್ ಕುಮಾರ್ ಕಟೀಲ್

ಉಡುಪಿ: ಆಝಾನ್ ಕುರಿತು ಸಂವಿಧಾನದ ವ್ಯಾಪ್ತಿಯಲ್ಲಿ ಮುತಾಲಿಕ್ ಬೇಡಿಕೆ ಈಡೇರಿಸ್ತೇವೆ: ನಳಿನ್ ಕುಮಾರ್ ಕಟೀಲ್

- Advertisement -
- Advertisement -

ಉಡುಪಿ: ಆಜಾನ್ ವಿರುದ್ದ ಮುತಾಲಿಕ್ ಹೋರಾಟ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ,ಆಝಾನ್ ಕುರಿತು ನ್ಯಾಯಾಲಯದ ತೀರ್ಪಿನಂತೆ ಕ್ರಮ‌ ಕೈಗೊಳ್ಳಲಾಗುತ್ತದೆ. ಸರ್ಕಾರ, ಸಾಂವಿಧಾನಿಕ ಜವಾಬ್ದಾರಿ ಬೇರೆ, ಹೋರಾಟಗಾರರ ಮನೋಭಾವನೆ ಬೇರೆ. ಸಂಘಟನಾತ್ಮಕವಾಗಿ ನಾವು ಹೇಳಿದಾಗ ಸರ್ಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗಲ್ಲ ಎಂದಿದ್ದಾರೆ.

ಹಾಗೇ ಮುತಾಲಿಕ್ ಸಹಜವಾದ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.ಸಂವಿಧಾನದಡಿಯಲ್ಲಿ ಮುತಾಲಿಕರ ಯಾವ ಅಪೇಕ್ಷೆ ಪೂರೈಸಲು ಸಾಧ್ಯವೋ ಅದನ್ನು ಪೂರೈಸುತ್ತೇವೆ. ಸಾಂವಿಧಾನಾತ್ಮಕವಾಗಿ ಕಾನೂನಿನ ಕೆಲವು ಅಡೆತಡೆಗಳಿವೆ. ಎಲ್ಲವನ್ನೂ ಗಮನಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!