Saturday, May 4, 2024
Homeತಾಜಾ ಸುದ್ದಿಅತಿ ಹೆಚ್ಚು ಗರ್ಭನಿರೋಧಕಗಳನ್ನು ಬಳಸುವುದು ಮುಸ್ಲಿಮರು: ಯೋಗಿಗೆ ಓವೈಸಿ ತಿರುಗೇಟು

ಅತಿ ಹೆಚ್ಚು ಗರ್ಭನಿರೋಧಕಗಳನ್ನು ಬಳಸುವುದು ಮುಸ್ಲಿಮರು: ಯೋಗಿಗೆ ಓವೈಸಿ ತಿರುಗೇಟು

spot_img
- Advertisement -
- Advertisement -

ಹೈದರಾಬಾದ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಜನಸಂಖ್ಯಾ ಅಸಮತೋಲನ’ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಗರ್ಭನಿರೋಧಕಗಳನ್ನು ಅತಿ ಹೆಚ್ಚು ಬಳಸುವುದು ಮುಸ್ಲಿಮರೇ ಎಂದು ಹೇಳಿದ್ದಾರೆ.

ಮುಸ್ಲಿಮರು ಭಾರತದ ಸ್ಥಳೀಯರಲ್ಲವೇ? ನಾವು ವಾಸ್ತವವನ್ನು ನೋಡಿದರೆ, ಬುಡಕಟ್ಟುಗಳು ಮತ್ತು ದ್ರಾವಿಡರು ಮಾತ್ರವೇ ಮೂಲ ನಿವಾಸಿಗಳು. ಉತ್ತರ ಪ್ರದೇಶದಲ್ಲಿ ಯಾವುದೇ ಕಾನೂನು ಇಲ್ಲದೆಯೂ, ಉದ್ದೇಶಿತ ಸಂತಾನೋತ್ಪತ್ತಿ ಪ್ರಮಾಣವನ್ನು 2026-2030ರ ವೇಳೆಗೆ ಸಾಧಿಸಬಹುದಾಗಿದೆ” ಎಂದು ಓವೈಸಿ ಹೇಳಿದ್ದಾರೆ.

ಅವರ ಆರೋಗ್ಯ ಸಚಿವರು ಹೇಳುತ್ತಾರೆ, ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಯಾವುದೇ ಕಾನೂನು ಬೇಕಿಲ್ಲ ಎಂದು. ಅತಿ ಹೆಚ್ಚು ಗರ್ಭನಿರೋಧಕಗಳನ್ನು ಬಳಸುತ್ತಿರುವವರು ಮುಸ್ಲಿಮರು. 2016ರಲ್ಲಿ ಒಟ್ಟು ಸಂತಾನೋತ್ಪತ್ತಿ ಪ್ರಮಾಣ 2.6ರಷ್ಟಿತ್ತು. ಅದು ಈಗ 2.3ಕ್ಕೆ ಇಳಿದಿದೆ. ಭಾರತದ ಜನಸಂಖ್ಯಾ ಅನುಪಾತವು ಬೇರೆ ಎಲ್ಲ ದೇಶಗಳ ನಡುವೆ ಅತ್ಯುತ್ತಮವಾಗಿದೆ” ಎಂದಿದ್ದಾರೆ.

2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತಿ ಹೆಚ್ಚಿನ ಜನಸಂಖ್ಯಾ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಸೋಮವಾರ ತನ್ನ ವರದಿಯಲ್ಲಿ ಅಂದಾಜಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರಿಯಬೇಕು. ಆದರೆ ಅದೇ ವೇಳೆ ‘ಜನಸಂಖ್ಯಾ ಅಸಮತೋಲನ’ ನಡೆಯಲು ಅವಕಾಶ ನೀಡಬಾರದು ಎಂದು ತಿಳಿಸಿದ್ದರು.

“ಜನಸಂಖ್ಯಾ ಬೆಳವಣಿಗೆ ವೇಗ ಅಥವಾ ಕೆಲವು ಸಮುದಾಯಗಳ ಶೇಕಡಾವಾರು ಅಧಿಕವಾಗಲು ಅನುವು ಮಾಡಬಾರದು. ಜಾಗೃತಿ ಅಥವಾ ಕಾನೂನಿನ ಮೂಲಕ ಮೂಲನಿವಾಸಿಗಳ ಜನಸಂಖ್ಯೆಯನ್ನು ನಾವು ಸ್ಥಿರಗೊಳಿಸಿದ್ದೇವೆ” ಎಂದು ಹೇಳಿದ್ದರು.

ಜನಸಂಖ್ಯಾ ಸ್ಥಿರೀಕರಣದ ಜಾಗೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕಳೆದ ಐದು ದಶಕಗಳಿಂದ ನಡೆಸಲಾಗುತ್ತಿದೆ. ಒಂದು ಪ್ರಮಾಣಕ್ಕೆ ಜನಸಂಖ್ಯೆಯು ಸಮಾಜದ ಸಾಧನೆ. ಆದರೆ ಸಮಾಜ ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿ ಉಳಿದಾಗ ಮಾತ್ರವೇ ಇದು ಸಾಧನೆಯಾಗಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಜನಸಂಖ್ಯಾ ವಿಭಾಗ ಬಿಡುಗಡೆ ಮಾಡಿರುವ ವಿಶ್ವ ಜನಸಂಖ್ಯೆ ನಿರೀಕ್ಷಣೆ 2022ರ ವರದಿಯಲ್ಲಿ, 2022ರ ನವೆಂಬರ್ 15ರಂದು ಜಗತ್ತಿನ ಜನಸಂಖ್ಯೆ ಎಂಟು ಬಿಲಿಯನ್ ಆಗಲಿದೆ. 2030ರಲ್ಲಿ ಜಾಗತಿಕ ಜನಸಂಖ್ಯೆ 8.5 ಬಿಲಿಯನ್, 2050ರ ವೇಳೆಗೆ 970 ಕೋಟಿ ಮತ್ತು 2100ರ ವೇಳೆಗೆ 10.4 ಬಿಲಿಯನ್ ಆಗಲಿದೆ ಎಂದು ವಿಶ್ವಸಂಸ್ಥೆಯ ಇತ್ತೀಚಿನ ಅಂದಾಜು ಹೇಳಿದೆ.

2021ರ ಜುಲೈನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದ ಹೊಸ ಜನಸಂಖ್ಯಾ ನೀತಿ ಘೋಷಿಸಿತ್ತು. ಜನಸಂಖ್ಯಾ ನಿಯಂತ್ರಣಕ್ಕೆ ಸಹಾಯ ಮಾಡಲು ಜನರಿಗೆ ಉತ್ತೇಜಕಗಳನ್ನು ನೀಡುವುದು ಇದರ ಗುರಿಯಾಗಿತ್ತು. ಪ್ರತಿ ವರ್ಷ ಜುಲೈ 11ರ ದಿನವನ್ನು ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಇದೇ ವೇಳೆ ವಿಶ್ವಸಂಸ್ಥೆ ಭಾರತವು ಚೀನಾವನ್ನು ಮುಂದಿನ ವರ್ಷ ಜನಸಂಖ್ಯೆ ವಿಚಾರದಲ್ಲಿ ಹಿಂದಿಕ್ಕಲಿದೆ ಎಂದು ಹೇಳಿದೆ.

- Advertisement -
spot_img

Latest News

error: Content is protected !!