Monday, June 8, 2026
Homeಕರಾವಳಿಉಡುಪಿಉಡುಪಿ: ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರ ಮನವಿ

ಉಡುಪಿ: ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರ ಮನವಿ

- Advertisement -
- Advertisement -

ಉಡುಪಿ : ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರ್ಬಂಧ ವಿಚಾರವಾಗಿ ಮುಸ್ಲಿಂ ವರ್ತಕರು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶಕ್ಕೆ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ಪರವಾಗಿ ಅಬೂಬಕ್ಕರ್‌ ಅತ್ರಾಡಿ ನೇತೃತ್ವದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಒಂದು ಗುಂಪಿನ ಸಾಮರಸ್ಯ ಸಾಧ್ಯವಾಗುವುದಿಲ್ಲ. ಹಲವೆಡೆ ಹಸುಗಳನ್ನು ಕದ್ದು ಹಲವು ಹಿಂದುಗಳ ಬದುಕು ಬೀದಿಗೆ ಬಂದಿದೆ.

ಇಂತಹ ಘಟನೆಗಳಿಂದ ಹಿಂದೂ ಸಮಾಜ ಕೂಡಾ ಬಹಳ ಕಾಲದಿಂದ ನೋವನ್ನು ಅನುಭವಿಸಿದೆ. ನಮ್ಮೊಳಗೆ ಶಾಂತಿ ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯಕತೆಯಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

- Advertisement -

Latest News

error: Content is protected !!