Wednesday, June 3, 2026
Homeಕರಾವಳಿಕಾರ್ಕಳದಲ್ಲಿ ಮನೆಯಂಗಳಕ್ಕೆ ಬಂದ ಕಾಡುಕೋಣ

ಕಾರ್ಕಳದಲ್ಲಿ ಮನೆಯಂಗಳಕ್ಕೆ ಬಂದ ಕಾಡುಕೋಣ

- Advertisement -
- Advertisement -

ಕಾರ್ಕಳ: ಜನವಸತಿ ಪ್ರದೇಶಕ್ಕೆ ಕಾಡುಕೋಣ ಎಂಟ್ರಿಯಾದ ಕಾರಣ ಗ್ರಾಮಸ್ಥರಲ್ಲಿ ಕೆಲವು ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಲೀಲಾವತಿ ಪೂಜಾರ್ತಿ ಎಂಬವರ ಮನೆಯಂಗಳ ಮತ್ತು ತೋಟದಲ್ಲಿ ಓಡಾಟ ನಡೆಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದ್ದು, ಅರವಳಿಕೆ ನೀಡಿ ಕಾಡು ಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ನಂತರ ಕ್ರೇನ್ ಮೂಲಕ ಕಾಡುಕೋಣವನ್ನು ಎತ್ತಿ ಲಾರಿಗೆ ತುಂಬಿಸಿ ಕುದುರೆಮುಖ ವನ್ಯಜೀವಿ ಧಾಮಕ್ಕೆ ರವಾನೆ ಮಾಡಲಾಗಿದೆ.

- Advertisement -

Latest News

error: Content is protected !!