Thursday, May 16, 2024
Homeತಾಜಾ ಸುದ್ದಿಇಂಧನ ದರ ಏರಿಕೆ ಪ್ರಧಾನಿ ಮೋದಿಯವರ ದೈನಂದಿನ ಕೆಲಸ- ರಾಹುಲ್ ಗಾಂಧಿ ಟ್ವೀಟ್

ಇಂಧನ ದರ ಏರಿಕೆ ಪ್ರಧಾನಿ ಮೋದಿಯವರ ದೈನಂದಿನ ಕೆಲಸ- ರಾಹುಲ್ ಗಾಂಧಿ ಟ್ವೀಟ್

spot_img
- Advertisement -
- Advertisement -

ನವದೆಹಲಿ: ಇಂಧನ ದರ ಹೆಚ್ಚಳದ ಕುರಿತು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರತಿದಿನದ ಕಾರ್ಯದಲ್ಲಿ ಇಂಧನ ಬೆಲೆಯ ಹೆಚ್ಚಳವೂ ಒಂದು ಎಂದು ಟ್ವೀಟ್ ಮಾಡಿದ್ದಾರೆ.

ಸತತ 9 ದಿನಗಳಲ್ಲಿ 8ನೇ ಬಾರಿ ಇಂಧನ ದರ ಏರಿಕೆಯಾಗಿರುವುದರ ಕುರಿತು ವಾಗ್ದಾಳಿ ನಡೆಸಿದ ಅವರು, ಮೋದಿ ಅವರ ಮನ್ ಕಿ ಬಾತ್‍ನ್ನು ರೋಜ್ ಸುಬಾ ಕಿ ಬಾತ್ ಎಂದು ಟ್ವೀಟ್ ಮಾಡಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸೇರಿದಂತೆ 5 ಅಂಶಗಳನ್ನು ಪಟ್ಟಿ ಮಾಡಿ ಇವು ಪ್ರಧಾನಿ ಮೋದಿಯವರ ದೈನಂದಿನ ಮಾಡಬೇಕಾದ ಪಟ್ಟಿ ಎಂದು ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು, ಯುವಕರಿಗೆ ಉದ್ಯೋಗದ ಪೊಳ್ಳು ಕನಸುಗಳನ್ನು ಹೇಗೆ ತೋರಿಸುವುದು, ಇಂದು ಯಾವ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಬೇಕು?, ರೈತರನ್ನು ಇನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ, ಇವೆಲ್ಲವೂ ಪ್ರಧಾನ ಮಂತ್ರಿ ಅವರು ಪ್ರತಿನಿತ್ಯ ಮಾಡುವ ಕೆಲಸ ಎಂದಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದು, ನಾಳೆಯಿಂದ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ. ಮೂರು ಹಂತದ ಪ್ರತಿಭಟನಾ ಅಭಿಯಾನದಲ್ಲಿ ಮೊದಲನೆಯದಾಗಿ ಮಾರ್ಚ್ 31ರಂದು, ಎರಡನೆಯದಾಗಿ ಏಪ್ರಿಲ್ 2 ಮತ್ತು ಏಪ್ರಿಲ್ 4ರ ನಡುವೆ ಮತ್ತು ಮೂರನೆಯದು ಏಪ್ರಿಲ್ 7ರಂದು ನಡೆಯಲಿದೆ.

- Advertisement -
spot_img

Latest News

error: Content is protected !!