Friday, May 17, 2024
Homeಕರಾವಳಿಪುತ್ತೂರಿನಲ್ಲಿ ಸಾಮರಸ್ಯ ಸಾರಿದ ಮುಸ್ಲಿಂ ಕುಟುಂಬ : ತಮ್ಮ ಗದ್ದೆಯನ್ನು ವಿಷ್ಣುಮೂರ್ತಿ ದೇಗುಲಕ್ಕೆ ಬಿಟ್ಟುಕೊಟ್ಟ ಮುಸ್ಲಿಂ...

ಪುತ್ತೂರಿನಲ್ಲಿ ಸಾಮರಸ್ಯ ಸಾರಿದ ಮುಸ್ಲಿಂ ಕುಟುಂಬ : ತಮ್ಮ ಗದ್ದೆಯನ್ನು ವಿಷ್ಣುಮೂರ್ತಿ ದೇಗುಲಕ್ಕೆ ಬಿಟ್ಟುಕೊಟ್ಟ ಮುಸ್ಲಿಂ ಬಾಂಧವರು

spot_img
- Advertisement -
- Advertisement -

ಪುತ್ತೂರು:  ಕರಾವಳಿ ಅಂದಾಕ್ಷಣ ಬಹುತೇಕರ ಕಲ್ಪನೆ ಅಲ್ಲಿ ಹಿಂದೂ ಮುಸ್ಲೀಂ ಗಲಾಟೆ ತಪ್ಪಿದ್ದಲ್ಲ. ಹಿಂದೂಗಳು ಹಾಗೂ ಮುಸ್ಲಿಂ ಅಂದರೆ ಬದ್ಧ ವೈರಿಗಳು ಅಂತಾ. ಆದ್ರೆ ಕರಾವಳಿಯಲ್ಲಿ ಇಂದಿಗೂ ಬಹುತೇಕ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರಂತೆ ಇರೋದು ಕಣ್ಣಿಗೆ ಕಾಣಲ್ಲ.ಯಾರದ್ದೋ ಸ್ವಾರ್ಥಕೋಸ್ಕರ ನಡೆಯುವ ಕೋಮು ಗಲಭೆಗಳು ದೊಡ್ಡದಾಗಿ ಸುದ್ದಿಯಾಗುತ್ತಿರೋದು ಮಾತ್ರ ವಿಪರ್ಯಾಸ.

ಆದ್ರೆ ಅತ್ಯಂತ ಹೆಮ್ಮೆಯ ಹಾಗೂ ಹಿಂದೂ ಮುಸ್ಲಿಂರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ. ಅಣ್ಣ ತಮ್ಮಂದಿರಾದ ಅಬ್ಬಾಸ್ ಮತ್ತು ಅಬೂಬಕ್ಕರ್ ಅವರ ಗದ್ದೆ ಹಾಗೂ ಇವರ ಅಣ್ಣನ ಮಗನಾದ ಪುತ್ತು ಎಂಬವರ ಗದ್ದೆ ಅಕ್ಕಪಕ್ಕದಲ್ಲೇ ಇದ್ದು, 3 ಎಕರೆ ವಿಶಾಲವಾಗಿದೆ. ಪ್ರತೀ ವರ್ಷ ಇವರು ಮುಂಗಾರು ಬೇಸಾಯ ಮಾಡುತ್ತಾರೆ. ವಿಶೇಷವೆಂದರೆ ಈ ಬಾರಿ ತಮ್ಮ ಹೊಟ್ಟೆಪಾಡನ್ನೂ ಯೋಚಿಸದೆ ಇವರು ಗದ್ದೆ ಬೇಸಾಯವನ್ನು ಎಲಿಯ ವಿಷ್ಣುಮೂರ್ತಿ ದೇವಳಕ್ಕಾಗಿ ತ್ಯಾಗ ಮಾಡಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಇಲ್ಲಿ ಬೇಸಾಯ ಮಾಡಿದ್ದು, ಇದರಲ್ಲಿ ಬೆಳೆದ ಅಕ್ಕಿ ದೇವಳಕ್ಕೆ ಸೇರಲಿದೆ. ಗದ್ದೆಯ ಜಮೀನು ವಾರಸುದಾರರಲ್ಲೇ ಉಳಿಯುತ್ತದೆ.ಈ ಮೂಲಕ ಈ ಕುಟುಂಬ ಕೋಮು ಸೌಹಾರ್ದತೆಯ ಸಾಮರಸ್ಯ ಸಾರಿದೆ.

ಇಲ್ಲಿ ಹಿಂದೂ ಮುಸ್ಲಿಂರು ಭಾಯಿ ಭಾಯಿ….

ಇನ್ನು ಈ ಗ್ರಾಮದಲ್ಲಿ ಎಲ್ಲ ಜಾತಿಯವರೂ ಒಂದೇ ತಾಯಿಯ ಮಕ್ಕಳಂತೆ ಜೀವನ ಮಾಡುತ್ತಿದ್ದು, ತಮ್ಮೂರಿನ ದೇವಸ್ಥಾನದ ಅಭಿವೃದ್ಧಿ ಆಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಾಕಷ್ಟು ಅಕ್ಕಿ ಬೇಕಾಗುತ್ತದೆ. ಅದಕ್ಕಾಗಿ ಅದನ್ನು ಈ ಬಾರಿ ಬೇಸಾಯ ಮಾಡದೇ ಇರಲು ನಿರ್ಧರಿಸಿ ಅದನ್ನು ದೇವಸ್ಥಾನದ ವತಿಯಿಂದಲೇ ಮಾಡಲು ಒಪ್ಪಿಗೆ ನೀಡಿದ್ದಾರೆ.

ಗದ್ದೆ ನಾಟಿಯಲ್ಲೂ ಸೌಹಾರ್ದತೆಯ ಸಂದೇಶ ಸಾರಿದ ಗ್ರಾಮಸ್ಥರು

ಮುಸ್ಲಿಂ ಬಂಧುಗಳು ಒಪ್ಪಿಗೆ ನೀಡಿದ ಗದ್ದೆಯಲ್ಲಿ ನಾಟಿ ನಡೆದಾಗ ಸ್ವತಃ ಅಬ್ಬಾಸ್, ಪುತ್ತು, ಸತ್ತಾರ್ ಕುಟುಂಬಸ್ಥರು ಉಚಿತವಾಗಿ ಸೇವೆ ನೀಡಿದ್ದಾರೆ. ಇಲ್ಲಿಂದ 60 ಕಿ.ಮೀ. ದೂರದ ಬೆಳ್ತಂಗಡಿ ತಾಲೂಕಿನ ಕಳೆಂಜದ ಗಿರೀಶ್ ಗೌಡ 800 ಸೂಡಿ ನೇಜಿ ಉಚಿತವಾಗಿ ನೀಡಿದ್ದಲ್ಲದೆ, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಕೆ. ನೇತೃತ್ವದಲ್ಲಿ 16 ಮಂದಿ ಬಂದು ಉಚಿತವಾಗಿ ನಾಟಿ ಕಾರ್ಯ ನಡೆಸಿಕೊಟ್ಟರು. ಇವರ ಜತೆ ಎಲಿಯ ಪರಿಸರದ 40 ಗ್ರಾಮಸ್ಥರು ಸೇರಿಕೊಂಡರು.

ಊರಿನ ಪ್ರಾಚೀನ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿದ್ದು, ಗ್ರಾಮಸ್ಥರೆಲ್ಲ ಹಗಲು ರಾತ್ರಿ ಕರಸೇವೆ ಮಾಡುತ್ತಿದ್ದಾರೆ. ಮುಂದಿನ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. ಉತ್ಸವ ಸಂದರ್ಭದಲ್ಲಿ ಬೇಕಾದ ಅಕ್ಕಿಯನ್ನು ದೇವಳದ ಪರಿಸರದಲ್ಲೇ ಬೆಳೆಸಿದರೆ ಉತ್ತಮವೆಂದು ಜೀರ್ಣೋದ್ಧಾರ ಸಮಿತಿ ಯೋಚಿಸಿದಾಗ ಸ್ಥಳೀಯ ವೆಂಕಪ್ಪ ನಾಯ್ಕ ಎಂಬುವರು ತಾವು ಅನೇಕ ವರ್ಷಗಳಿಂದ ಬೇಸಾಯ ಮಾಡದೇ ಬಿಟ್ಟಿರುವ ಗದ್ದೆಯನ್ನು ಬೇಸಾಯಕ್ಕಾಗಿ ಬಿಟ್ಟುಕೊಡಲು ನಿರ್ಧರಿಸಿದರು.ಅದರಂತೆ ಗದ್ದೆಯನ್ನು ದೇಗುಲಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದೀಗ ಈ ಮುಸ್ಲಿಂ ಕುಟುಂಬದ ಈ ಮಹಾನ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!