ಉಪ್ಪಿನಂಗಡಿ: ಎಲ್ಲಿಯವರೆಗೆ ಮೋಸ ಹೋಗುವವರು ಇರ್ತಾರೋ ಅಲ್ಲಿವರೆಗೆ ಮೋಸ ಮಾಡುವವರು ಇರ್ತಾರೆ ಅನ್ನೋ ಹಾಗೇ ಹಾಗೇ ಸೋಷಿಯಲ್ ಮೀಡಿಯಾ ಮೂಲಕ ಯುವತಿಯರು ಮೋಸ ಹೋಗುವ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಇದೀಗ ಫೇಸ್ ಬುಕ್ ಮೂಲಕ ಮುಸ್ಲಿಂ ಯುವಕನೊಬ್ಬ ಹಿಂದೂ ಮುವತಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಡಬ ತಾಲೂಕಿನ ಮರ್ದಾಳ ಪಾಲತಡ್ಕ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ (25) ಎಂಬಾತ ಫೇಸ್ ಬುಕ್ ನಲ್ಲಿ ಖುಷಿ ಸಂಜು ಕನಕರಾಜು ಎಂಬ ಖಾತೆಯನ್ನು ತೆರೆದಿದ್ದಾನೆ.

ಬಳಿಕ ತಾನೊಬ್ಬ ಸಾಚಾ ಅಂಚಾ ಬಿಂಬಿಸಿಕೊಂಡು ಯುವತಿಯೊಬ್ಬಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಆತನ ಸಭ್ಯತೆಗೆ ಮರುಳಾದ ಯುವತಿ ಆತನ ಜೊತೆ ಫೇಸ್ ಬುಕ್ ನಲ್ಲಿ ಸಂಪರ್ಕವಿರಿಸಿಕೊಂಡಿದ್ದಾಳೆ. ಹಾಗೇ ವಾಟ್ಸಾಫ್ ನಂಬರ್ ಕೂಡ ಪಡೆದುಕೊಂಡಿದ್ದಾನೆ. ಬಳಿಕ ಇಬ್ಬರೂ ನಿರಂತರ ಚಾಟಿಂಗ್ ನಲ್ಲಿದ್ದರು.

ಇನ್ನೂ ಇದೇ ಸಂಪರ್ಕ ಭೇಟಿಯವರೆಗೆ ಬಂದು ಯುವತಿ ಆತನೊಂದಿಗೆ ದೇವಸ್ಥಾನಕ್ಕೂ ತೆರಳಿದ್ದಾಳೆ. ದೇವಾಲಯಕ್ಕೆ ಹೋದ ವೇಳೆ ಆತ ಆಕೆಯ ಮುಂದೆ ತಾನು ಅಪ್ಪಟ ಹಿಂದೂ ಎಂದು ತೋರಿಸಿಕೊಳ್ಳಲು ಹಣೆಗೆ ತಿಲಕ ಇಟ್ಟುಕೊಂಡಿದ್ದಾನೆ. ಜೊತೆಗೆ ಆಕೆಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ.
ಈತನ ಫೋಟೋ ನೋಡಿದ ಕೆಲವರಿಗೆ ಸಂದೇಹ ಬಂದು ವಿಚಾರಿಸದಾಗ ಅಸಲಿಯತ್ತು ಬಯಲಾಗಿದೆ. ಇನ್ನು ಕನಕರಾಜು ಎಂಬ ಹೆಸರಿನಲ್ಲೂ ಈತ ಫೇಸ್ ಬುಕ್ ಖಾತೆಯನ್ನು ತೆರೆದಿದ್ದಾನೆ. ಆ ಖಾತೆಯ ಮೂಲಕ ಎಷ್ಟು ಜನರಿಗೆ ವಂಚಿಸಿದ್ದಾನೋ ಗೊತ್ತಿಲ್ಲ. ಇದೀಗ ಈತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.