Sunday, June 7, 2026
Homeತಾಜಾ ಸುದ್ದಿಮುರುಘಾಮಠಕ್ಕೆ ತಾತ್ಕಾಲಿಕ ಉಸ್ತುವಾರಿಯಾಗಿ ಮಹಾಂತರುದ್ರ ಸ್ವಾಮೀಜಿ ನೇಮಕ

ಮುರುಘಾಮಠಕ್ಕೆ ತಾತ್ಕಾಲಿಕ ಉಸ್ತುವಾರಿಯಾಗಿ ಮಹಾಂತರುದ್ರ ಸ್ವಾಮೀಜಿ ನೇಮಕ

- Advertisement -
- Advertisement -

ಚಿತ್ರದುರ್ಗ; ಮುರುಘಾಮಠದ ಡಾ.ಶಿವಮೂರ್ತಿ ಶರಣರ ಬಂಧನದ ಬೆನ್ನಲ್ಲೇ ಇದೀಗ ಮುರುಘಾಮಠಕ್ಕೆ ತಾತ್ಕಾಲಿಕವಾಗಿ ಉಸ್ತುವಾರಿಯನ್ನಾಗಿ ದಾವಣಗೆರೆಯ ಹೆಬ್ಬಾಳು ಶಾಖಾ ಮಠದ ಮಹಾಂತರುದ್ರ ಸ್ವಾಮೀಜಿಗಳನ್ನು ನೇಮಕ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹೆಬ್ಬಾಳದಲ್ಲಿರುವ ಮುರುಘಾಮಠದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾಗಿರುವ ಮಹಾಂತ ರುದ್ರ ಸ್ವಾಮೀಜಿ ಅವರಿಗೆ ಚಿತ್ರದುರ್ಗ ಮಠದ ಆಗುಹೋಗುಗಳ ಎಲ್ಲಾ ಜವಾಬ್ದಾರಿಗಳನ್ನು ಸದ್ಯಕ್ಕೆ ವಹಿಸಲಾಗಿದೆ.

ಮುರುಘಾಮಠದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬರದಂತೆ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಬ್ಯಾಕ್ ಗೇಟ್, ಫ್ರಂಟ್ ಗೇಟ್ ಕೂಡ ಬಂದ್ ಮಾಡಲಾಗಿದೆ. ಕೇವಲ ಮಠದ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸದ್ಯ ಭಕ್ತಾದಿಗಳು ಇಲ್ಲದೇ ಮಠದ ಆವರಣ ಖಾಲಿ ಖಾಲಿಯಾಗಿದೆ.

- Advertisement -

Latest News

error: Content is protected !!