Thursday, June 4, 2026
Homeಕರಾವಳಿಮೋದಿ ಸಮಾವೇಶದ ವೇಳೆ ಹೆತ್ತವರಿಂದ ಬೇರ್ಪಟ್ಟ ಬಾಲಕಿಯನ್ನು ಮನೆ ತಲುಪಿಸಿದ ಪೊಲೀಸರು

ಮೋದಿ ಸಮಾವೇಶದ ವೇಳೆ ಹೆತ್ತವರಿಂದ ಬೇರ್ಪಟ್ಟ ಬಾಲಕಿಯನ್ನು ಮನೆ ತಲುಪಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ನಿನ್ನೆ ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮೋದಿ ಸಮಾವೇಶದ ವೇಳೆ ಹೆತ್ತವರಿಂದ ಬೇರ್ಪಟ್ಟ ವಿದ್ಯಾರ್ಥಿನಿಯನ್ನು ಸಂಚಾರ ಉಪವಿಭಾಗದ ಎಸಿಪಿ‌ ಗೀತಾ ಕುಲಕರ್ಣಿ ‌ನೇತೃತ್ವದ ಪೊಲೀಸರು ಮರಳಿ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.

ಕಾವೂರು ಜ್ಯೋತಿನಗರದ ನಿವಾಸಿ ಯಮನಪ್ಪ- ದೇವಕಿ ದಂಪತಿಯ ಪುತ್ರಿ ಪ್ರಜಾ ಮೇಠಿ (10) ಹೆತ್ತವರ ಜೊತೆಗೂಡಿ  ಪ್ರಧಾನಿಯ‌ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದಳು. ಕಾವೂರಿನ ವಿದ್ಯಾಜ್ಯೋತಿ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾದ ಈಕೆ ಜನಜಂಗುಳಿಯ ಮಧ್ಯೆ ಹೆತ್ತವರಿಂದ ಬೇರ್ಪಟ್ಟಿದ್ದಳು. ಪೊಲೀಸರ ಗಮನಕ್ಕೆ ಬಂದ ನಂತರ ಈಕೆಯ ಹೆತ್ತವರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬಳಿಕ‌ ಆಕೆಯನ್ನು ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!