Friday, June 28, 2024
Homeಉತ್ತರ ಕನ್ನಡಸಹೋದರಿಯನ್ನ ಚುಡಾಯಿಸಿದವನನ್ನು ಚಾಕುವಿನಿಂದ ಇರಿದು ಕೊಲೆಗೈದ ಅಣ್ಣಂದಿರು

ಸಹೋದರಿಯನ್ನ ಚುಡಾಯಿಸಿದವನನ್ನು ಚಾಕುವಿನಿಂದ ಇರಿದು ಕೊಲೆಗೈದ ಅಣ್ಣಂದಿರು

spot_img
- Advertisement -
- Advertisement -

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಬೇಪಾರಿ ಪ್ಲಾಟ್‌ನಲ್ಲಿ ಸಹೋದರಿಗೆ ಚುಡಾಯಿಸಿದ ಎಂಬ ಕಾರಣಕ್ಕೆ, ಯುವಕನೊಬ್ಬನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.


ಇನ್ನು ಕೊಲೆಯಾದ ಯವಕನನ್ನುಆಟೋ ಚಾಲಕ ಚಂದ್ರು ಗುಗ್ಗರಿ ಎಂದು ಗುರಿತಿಸಲಾಗಿದೆ. ಈತನನ್ನು ಆರೋಪಿಗಳನ್ನು ವಿನಾಯಕ ಭಜಂತ್ರಿ ಮತ್ತು ಕಿರಣ ಭಜಂತ್ರಿ ಎಂದು ಪೊಲೀಸರು ಹೇಳಿದ್ದು ಅವರನ್ನು ಈಗ ಬಂಧಿಸಿದ್ದಾರೆ. ಗುರುವಾರ ರಾತ್ರಿ ಚಂದ್ರು ಬೆನ್ನು, ಕುತ್ತಿಗೆ ಹಾಗೂ ಹೊಟ್ಟೆಗೆ ಸಹೋದರರು ಚಾಕುವಿನಿಂದ ಇರಿದಿದ್ದರು.


ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

- Advertisement -
spot_img

Latest News

error: Content is protected !!