Sunday, June 7, 2026
Homeತಾಜಾ ಸುದ್ದಿತಾಳಿ ಕಟ್ಟುವ ವೇಳೆ ಕಂಠಪೂರ್ತಿ ಕುಡಿದು ಬಂದ ವರ :ವಧುವಿಗೆ ಹಾರ ಹಾಕುವ ಬದಲು ಆಕೆಯ...

ತಾಳಿ ಕಟ್ಟುವ ವೇಳೆ ಕಂಠಪೂರ್ತಿ ಕುಡಿದು ಬಂದ ವರ :ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ ಟೈಟ್ ಮಾಸ್ಟರ್

- Advertisement -
- Advertisement -

ಉತ್ತರ ಪ್ರದೇಶ: ತಾಳಿ ಕಟ್ಟುವ ವೇಳೆ ವರನೊಬ್ಬ  ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ, ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ, ವರನು ಕಂಠ ಪೂರ್ತಿ ಕುಡಿದು ತೂರಾಡುತ್ತಿದ್ದು, ಅವನನ್ನು ಮತ್ತೊಬ್ಬ ಹಿಂಬದಿಯಿಂದ ಹಿಡಿದು ಹಿಡಿದುಕೊಂಡಿರುವುದನ್ನು ನೋಡಬಹುದು. ಇಂತಹ ಸ್ಥಿತಿಯಲ್ಲೂ ಅಲ್ಲಿ ಮದುವೆ ಶಾಸ್ತ್ರ ಮಾಡುತ್ತಿದ್ದಾರೆ. ಆದ್ರೆ, ಅಲ್ಲಿ ಏನಾಗುತ್ತಿದೆ ಎಂಬ ಅರಿವು ವರನಿಗೇ ಇಲ್ಲ. ಈ ವೇಳೆ ವಧು ವರನಿಗೆ ಹಾರ ಹಾಕಿದಳು. ನಂತ್ರ, ವರ ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ್ದಾನೆ. ಇದರಿಂದ ಕೋಪಗೊಂಡ ಆಕೆ ಎರ್ರಾಬಿರ್ರಿ ಕಪಾಳಮೋಕ್ಷ ಮಾಡಿದ್ದಾಳೆ.

- Advertisement -

Latest News

error: Content is protected !!