Friday, June 5, 2026
Homeಕರಾವಳಿಉಡುಪಿಉಡುಪಿಯಲ್ಲಿ ಕಾಪು ಭಜರಂಗದಳದ ಸಂಚಾಲಕನ ಹತ್ಯೆಗೆ ಸಂಚು ಆರೋಪ: ಓರ್ವನ ಬಂಧನ

ಉಡುಪಿಯಲ್ಲಿ ಕಾಪು ಭಜರಂಗದಳದ ಸಂಚಾಲಕನ ಹತ್ಯೆಗೆ ಸಂಚು ಆರೋಪ: ಓರ್ವನ ಬಂಧನ

- Advertisement -
- Advertisement -

ಉಡುಪಿ: ಕಾಪುವಿನಲ್ಲಿ ಭಜರಂಗದಳ ಸಂಚಾಲಕನ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಓರ್ವನನ್ನು ಬಂಧಿಸಲಾಗಿದೆ.  ಇಂದು ಬೆಳಗ್ಗೆ ಕಾಪು ಭಜರಂಗದಳದ ಪ್ರಮುಖ ಸುಧೀರ್ ಸೋನಾ ಅವರ ಮನೆಗೆ 1 1 ಗಂಟೆಗೆ ಆಯುಧದೊಂದಿಗೆ ಮೂವರಿಂದ ನಾಲ್ಕು ಮಂದಿ ಯುವಕರು ಬಂದಿದ್ದರು ಎನ್ನಲಾಗಿದೆ.

ಹೀಗೆ ಬಂದರು ‘ಆಶಿಫ್’ ಎಂಬವರಿಗೆ ನಿಮ್ಮ ಬಳಿ ಮಾತನಾಡಲು ಇದೆ ಎಂದು ಮನೆಯಿಂದ ಹೊರಗೆ ಬರುವಂತೆ ಹೇಳಿದ್ದಾರೆ. ಇಬ್ಬರು ಬಳಿಕ ಆಶಿಫ್ ಅವರು ಮೇಲೆ ಕಾರಿನಲ್ಲಿ ಇದ್ದಾರೆ‌.  ಅವರಿಗೆ ನಿಮ್ಮ ಬಳಿ ಮಾತನಾಡಲು ಇದೆ.  ನೀವು ಈಗಲೇ ಬರಬೇಕು ಎಂದಿದ್ದಾರೆ. ಯುವಕರ ಮಾತಿನಿಂದ ಅನುಮಾನಗೊಂಡು ಸುಧೀರ್ ಸೋನಾ ಮನೆಯಿಂದ ಹೊರ ಹೋಗಿರಲಿಲ್ಲ. ಬಳಿಕ ಯುವಕರು ತೆರಳಿದ್ದಾರೆ. ಹೀಗೆ ತೆರಳುವ ವೇಳೆ ಆ ಯುವಕರ ಕೈಯಲ್ಲಿ  ಹರಿತವಾದ ಆಯುಧ ಇರುವುದನ್ನು ಸುಧೀರ್ ಹಾಗೂ ಅವರ ಪತ್ನಿ ಗಮನಿಸಿದ್ದಾರೆ ಎನ್ನಲಾಗಿದೆ.

ತಕ್ಷಣವೇ ಸುಧೀರ್ ಸೋನು ಪೋಲಿಸರಿಗೆ ಮಾಹಿತಿ ನೀಡಿದ್ದು, ಕಾರಿನಲ್ಲಿ ಇದ್ದ ಎಲ್ಲರನ್ನು ಪತ್ತೆ ಮಾಡಿ ಕಾಪು ಪೋಲಿಸರು ವಿಚಾರಣೆ ನಡೆಸಿದ್ದು, ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!