Friday, June 5, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ಚೂರಿಯಿಂದ ಇರಿದು ಗುಜರಿ ವ್ಯಾಪಾರಿಯ ಕೊಲೆಗೆ ಯತ್ನ

ಮಂಗಳೂರು; ಉಳ್ಳಾಲದಲ್ಲಿ ಚೂರಿಯಿಂದ ಇರಿದು ಗುಜರಿ ವ್ಯಾಪಾರಿಯ ಕೊಲೆಗೆ ಯತ್ನ

- Advertisement -
- Advertisement -

ಮಂಗಳೂರು; ಚೂರಿಯಿಂದ ಇರಿದು ಗುಜರಿ ವ್ಯಾಪಾರಿಯ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮಹಮ್ಮದ್ ಜಾವೇದ್ ಚೂರಿ ಇರಿತ ವ್ಯಕ್ತಿ. ಹಮೀದ್ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ.

ಜಾವೇದ್ ಪಂಜಿಮೊಗೊರು ನಿವಾಸಿ ಗುಜರಿ ವ್ಯಾಪಾರಿ ಹಮೀದ್ ಎಂಬಾತನನ್ನು ಮನೆಗೆ ಕರೆದು ಕೊಲೆ ಯತ್ನ ನಡೆಸಿದ್ದು, ಇದರಿಂದ ಗಂಭೀರ ಗಾಯಗೊಂಡ ಹಮೀದ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಜಾವೇದ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಹಮೀದ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!