Thursday, June 4, 2026
Homeತಾಜಾ ಸುದ್ದಿಭಜನಾ ಗಾಯಕ ಸತೀಶ್ ಪೂಜಾರಿ ವಿಧಿವಶ

ಭಜನಾ ಗಾಯಕ ಸತೀಶ್ ಪೂಜಾರಿ ವಿಧಿವಶ

- Advertisement -
- Advertisement -

ಮುಂಬೈ: ಮಹಾನಗರದಲ್ಲಿ ತಮ್ಮ ಭಜನೆಯ ಮೂಲಕವೇ ಹೆಸರುವಾಗಿದ್ದ ಚೆಂಬೂರು ತಿಲಕ್ ನಗರ್ ನಿವಾಸಿ ಸತೀಶ್ ಪೂಜಾರಿಯವರು(41) ನಿನ್ನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಚೆಂಬೂರು ತಿಲಕ್ ನಗರ್ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ಹಾಗೂ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತವೃಂದ ಬಾಂದ್ರ ಇದರ ಸಕ್ರಿಯ ಸದಸ್ಯರಾಗಿದ್ದ ಸತೀಶ್ ಪೂಜಾರಿಯವರು ಮುಂಬಯಿ ಮಹಾನಗರದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳಲ್ಲಿನ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಮೂಲತಃ ಕಾರ್ಕಳದ ಇರ್ವತ್ತೂರುನವರಾಗಿದ್ದ ಸತೀಶ್ ಪೂಜಾರಿಯವರು ಪತ್ನಿ ಬೇಬಿ ಎಸ್ ಪೂಜಾರಿ, ಏಕೈಕ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಆಗಲಿದ್ದಾರೆ. ಸತೀಶ್ ಪೂಜಾರಿ ಅವರ ನಿಧನಕ್ಕೆ ಚೆಂಬೂರು ತಿಲಕ್ ನಗರ್ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ಹಾಗೂ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತವೃಂದ ಬಾಂದ್ರಾ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಶೋಕವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!