- Advertisement -
- Advertisement -
ಮುಂಬೈ: ಮಹಾನಗರಿಯ ಬಾಂದ್ರಾದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ದಕ್ಷಿಣ ಭಾರತದ ಇಬ್ಬರು ನಟಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಮೃತ್ ನಗರದ ಮಹಿಳೆಯೊಬ್ಬರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ನೌಪಡ ಪ್ರದೇಶದ ಫ್ಲ್ಯಾಟ್‌ನ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಕಾರ್ಯಾಚರಣೆ ನಡೆಸುವ ವೇಳೆ ಆರೋಪಿಗಳೊಂದಿಗೆ ಮಂಚದಲ್ಲಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ದಕ್ಷಿಣ ಭಾರತದ ಇಬ್ಬರು ಸಹಕಲಾವಿದೆಯರನ್ನು ರಕ್ಷಣೆ ಮಾಡಿ, ಆರೋಪಿಗಳನ್ನ ಬಂಧಿಸಲಾಗಿದೆ.
ಇನ್ನೂ ಹಸೀನಾ ಮೆಮನ್, ಸ್ವೀಟಿ, ವಿಶಾಲ್ ಅಲಿಯಾಸ್ ಸುನಿಲ್ ಕುಮಾರ್, ಉತ್ತಮ್‌ಚಾಂದ್ ಜೈನ್ ಬಂಧಿತ ಆರೋಪಿಗಳು. ಅಲ್ಲದೇ ಆರೋಪಿಗಳಿಂದ 2.14 ಲಕ್ಷ ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
- Advertisement -