Friday, June 27, 2025
Homeತಾಜಾ ಸುದ್ದಿಮುಂಬೈ: ಜನರ ಮೇಲೆ ಕಾರು ಹರಿದು ನಾಲ್ವರು ಸಾವು, ನಾಲ್ವರ ಸ್ಥಿತಿ ಗಂಭೀರ !

ಮುಂಬೈ: ಜನರ ಮೇಲೆ ಕಾರು ಹರಿದು ನಾಲ್ವರು ಸಾವು, ನಾಲ್ವರ ಸ್ಥಿತಿ ಗಂಭೀರ !

spot_img
- Advertisement -
- Advertisement -

ಮುಂಬೈ: ಮಹಾನಗರದ ಕ್ರಾಫೋರ್ಡ್ ಮಾರುಕಟ್ಟೆ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ದಾರಿಹೋಕರ ಮೇಲೆ ಹರಿದ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಕ್ರಾಫರ್ಡ್ ಮಾರುಕಟ್ಟೆಯ ಕೆಫೆ ಜನತಾ ರೆಸ್ಟೋರೆಂಟ್ ಬಳಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಚಾಲಕ ಕೂಡ ಗಾಯಗೊಂಡಿದ್ದು, ಒಟ್ಟು ಐವರು ಗಾಯಾಳುಗಳನ್ನು ಜೆಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಬೇರೆ ಯಾರೂ ಇರಲಿಲ್ಲ.

ನೋಂದಣಿ ವಿವರಗಳ ಪ್ರಕಾರ, ಘಟನೆಯಲ್ಲಿ ಭಾಗಿಯಾಗಿರುವ ಬಿಳಿ ಎಸ್ಟೀಮ್ ವಿಎಕ್ಸ್‌ಐ ಕಾರು ಮುಂಬೈ ನಿವಾಸಿ ಜ್ಯೋತಿ ಬಾಬರಿಯಾ ಎಂಬವರಿಗೆ ಸೇರಿದ್ದಾಗಿದೆ.

- Advertisement -
spot_img

Latest News

error: Content is protected !!