Saturday, May 18, 2024
Homeಕರಾವಳಿಕಡಬ: ವಿದ್ಯುತ್ ವಯರ್ ಸ್ಪರ್ಶದಿಂದ ಕಾಡಾನೆ ಸಾವು

ಕಡಬ: ವಿದ್ಯುತ್ ವಯರ್ ಸ್ಪರ್ಶದಿಂದ ಕಾಡಾನೆ ಸಾವು

spot_img
- Advertisement -
- Advertisement -

ಕಡಬ: ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿದೆ. ಘಟನೆ ನಡೆದ ಪ್ರದೇಶವು ಬಿಳಿನೆಲೆ ಮತ್ತು ಕೊಂಬಾರು ಗ್ರಾಮದ ಗಡಿ ಪ್ರದೇಶವಾಗಿದೆ. ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವುದು ಬೆಳಗ್ಗೆ 5 ಗಂಟೆ ವೇಳೆಗೆ ಸ್ಥಳಿಯರ ಗಮನಕ್ಕೆ ಬಂದಿದೆ,

ಆಹಾರ ಅರಸಿ ನಾಡಿಗೆ ಬಂದ ಸಂದರ್ಭದಲ್ಲಿ ತೀರಾ ಕೆಳ ಮಟ್ಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಗಂಡು ಕಾಡಾನೆಯೊಂದು ಸಾವಿಗೀಡಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!