Wednesday, June 26, 2024
Homeಕರಾವಳಿಉಡುಪಿಉಡುಪಿ: ಸಮವಸ್ತ್ರ ವಿತರಣೆಯಲ್ಲಿ ಬಹುಕೋಟಿ ಹಗರಣದ ಆರೋಪ :ಶಿಕ್ಷಣ ಸಚಿವರ ವಿರುದ್ಧ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಉಡುಪಿ: ಸಮವಸ್ತ್ರ ವಿತರಣೆಯಲ್ಲಿ ಬಹುಕೋಟಿ ಹಗರಣದ ಆರೋಪ :ಶಿಕ್ಷಣ ಸಚಿವರ ವಿರುದ್ಧ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

spot_img
- Advertisement -
- Advertisement -

ಉಡುಪಿ :ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸುವ ಸಮವಸ್ತ್ರದಲ್ಲಿ ಬಹು ಕೋಟಿಯ ಹಗರಣ ಬೆಳಕಿಗೆ ಬಂದಿದ್ದು ಇದು ಶಿಕ್ಷಣ ಸಚಿವರ ಕಮಿಷನ್ ದಂಧೆಯಾಗಿದೆ. ನಿರಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬಿ.ಇ.ಒ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಆರ್ ಟಿ ಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ 2019 ರ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ ಸರ್ಕಾರವು ಹೊಲಿದ ಸಮವಸ್ತ್ರ ನೀಡಬೇಕೆಂದು ಹೇಳಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರ ನೀಡಿದ್ದ ಟೆಂಡರ್ ಪ್ರಕಾರ ಕೇವಲ 230 ರೂ. ಗೆ ಹೊಲಿದ ಎರಡು ಜೊತೆ ಸಮವಸ್ತ್ರ ಜೊತೆಗೆ ಶೂ, ಸಾಕ್ಸ್ ಹಾಗೂ ಟೈ ಕೂಡ ಎಸ್ ಡಿ ಎಂ ಸಿ ಮುಖಾಂತರ ವಿತರಣೆ ಮಾಡಲಾಗಿತ್ತು. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉದ್ಯೋಗವಾಗುತ್ತಿತ್ತು.

ಆದರೆ ಇದೀಗ ಸರ್ಕಾರವು ಎಸ್ ಡಿ ಎಂ ಸಿಯನ್ನು ಕಡೆಗಣಿಸಿ, ಕೇವಲ ಕಮಿಷನ್ ವ್ಯಾವೋಹದಿಂದ ಮಹಾರಾಷ್ಟ್ರ ಮೂಲದ ಕಂಪೆನಿಗೆ ಟೆಂಡರ್ ನೀಡಿ 250 ರೂ ಗಳಂತೆ ಹೊಲಿಯದ ಬಟ್ಟೆಯನ್ನು ನೀಡಲು ಮುಂದಾಗಿದೆ. ಈ ಮುಖಾಂತರ ಬಹುಕೋಟಿಯ ಹಗರಣ ನಡೆದಿದೆ ಎಂದು ಅಂದಾಜಿಸಲಾಗಿದೆ.

ಶಿಕ್ಷಣ ಸಚಿವರು ಈ ಹಗರಣದ ಹಿಂದೆ ಕಮಿಷನ್ ದಂಧೆ ನಡೆಸುತ್ತಿದ್ದು ಉಚ್ಛ ನ್ಯಾಯಾಲಯದ ತೀರ್ಪನ್ನು ಕೂಡ ಪರಿಗಣಿಸದೆ ನ್ಯಾಯಾಲಯದ ನಿಂದನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಕಮಿಷನ್ ದಂಧೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರು ಶೀಘ್ರ ರಾಜಿನಾಮೆ ನೀಡಬೇಕೆಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸಿತು.

- Advertisement -
spot_img

Latest News

error: Content is protected !!