Tuesday, May 7, 2024
Homeಕರಾವಳಿಮುಗೇರಡ್ಕ: ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ನೆನಪಿಗಾಗಿ ಗಿಡ ನೆಟ್ಟು ಗೌರವ ಅರ್ಪಣೆ

ಮುಗೇರಡ್ಕ: ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ನೆನಪಿಗಾಗಿ ಗಿಡ ನೆಟ್ಟು ಗೌರವ ಅರ್ಪಣೆ

spot_img
- Advertisement -
- Advertisement -

ಮುಗೇರಡ್ಕ: ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ಸೇವಾ ಸಮಿತಿ ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಮುಗೇರಡ್ಕದಲ್ಲಿ ದೈವಸ್ಥಾನದ ಮೊಕ್ತೇಸರರು ಆದ ರಾಮಣ್ಣ ಗೌಡ ದೇವಶ್ಯ ಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಶೋಕ್. ಪಿ ಎಲ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಬಂದಾರು ಮೊಗ್ರು ವ್ಯಪ್ತಿಯಾ ಅರಣ್ಯ ರಕ್ಷಕ ಆರ್.ಎಸ್ ಪಾಟೀಲ್, ಜಗದೀಶ್, ದಿನೇಶ್ ಪೂಜಾರಿ ( ಕಣಿಯೂರ್ ) ಹಾಗು ಪದ್ಮುಂಜ ಸಿಎ ಬ್ಯಾಂಕ್ ನ ನಿರ್ದೇಶಕಿ ಶೀಲಾವತಿ ಬಾಬು ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ನಂತರ ಇತ್ತೀಚಿಗೆ ಭಾರತ ಚೀನಾ ಗಡಿಯಲ್ಲಿ ವೀರ ಮರಣ ಹೊಂದಿದ 20 ಸೈನಿಕರಿಗೆ ಮೌನ ಪ್ರಾರ್ಥನೆ ಮತ್ತು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಮನೋಹರ್ ಗೌಡ ಅಂತರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಬಂದ ಅತಿಥಿ ಮತ್ತು ಸಭಿಕರಿಗೆ ಸ್ವಾಗತ ಕೋರಿದರು,

ನಿರೂಪಣೆಯನ್ನು ಪುರಂದರ ಎನ್ ನೆರವೇರಿಸಿದರು.ನಂತರ ದೈವಸ್ಥಾನದ ವಠಾರದಲ್ಲಿ ಬೇರೆ ಬೇರೆ ಜಾತಿ ಗಿಡಗಳನ್ನು ನೆಟ್ಟು ಊರಿನ ಹಿರಿಯರು ಮತ್ತು ಯುವ ಜನತೆ ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತ ಪಡಿಸಿ ಸಹಕರಿಸಿದರು.

- Advertisement -
spot_img

Latest News

error: Content is protected !!