Wednesday, June 3, 2026
Homeತಾಜಾ ಸುದ್ದಿಮೂಡಿಗೆರೆ: ಪ್ರೀತಿಸಿದ ಹುಡುಗಿಗೆ‌ ಬೇರೆ ಯುವಕನೊಂದಿಗೆ ಮದುವೆಗೆ ಸಿದ್ಧತೆ, ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಮೂಡಿಗೆರೆ: ಪ್ರೀತಿಸಿದ ಹುಡುಗಿಗೆ‌ ಬೇರೆ ಯುವಕನೊಂದಿಗೆ ಮದುವೆಗೆ ಸಿದ್ಧತೆ, ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಮೂಡಿಗೆರೆ: ಕಳೆದ ಹಲವಾರು ವರ್ಷಗಳಿಂದ ಪ್ರೀತಿಸಿದ ಹುಡುಗಿಗೆ‌ ಆಕೆಯ ಮನೆಯವರು ಬೇರೆ ಯುವಕನ ಜೊತೆ ಮದುವೆಗೆ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ ಮನನೊಂದ ಪ್ರಿಯಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ.

ಬಣಕಲ್ ನಿವಾಸಿ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ. ರಾಘವೇಂದ್ರ ತನ್ನದೇ ಊರಿನ ಯುವತಿಯೊಬ್ಬಳನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ. ಇವರಿಬ್ಬರು ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಯುವತಿಯ ಪೋಷಕರಿಗೆ ಇವರ ಪ್ರೀತಿಯ ವಿಷಯ ತಿಳಿಯುತ್ತಿದ್ದಂತೆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದರು.

ಈ ವಿಚಾರ ತಿಳಿದು ಮಾನಸಿಕವಾಗಿ ಖಿನ್ನತೆಗೆ ಒಳಗಾದ ರಾಘವೇಂದ್ರ, ಅತಿಯಾಗಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ರಾಘವೇಂದ್ರನಿಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!