Thursday, July 16, 2026
Homeಕೊಡಗುಕೊಡಗಿನ ಮೃತ ಯೋಧ ಅಲ್ತಾಫ್ ನಿವಾಸಕ್ಕೆ ಸಂಸದ ಪ್ರತಾಪ ಸಿಂಹ ಭೇಟಿ

ಕೊಡಗಿನ ಮೃತ ಯೋಧ ಅಲ್ತಾಫ್ ನಿವಾಸಕ್ಕೆ ಸಂಸದ ಪ್ರತಾಪ ಸಿಂಹ ಭೇಟಿ

- Advertisement -
- Advertisement -

ಮಡಿಕೇರಿ:‌ ಇತ್ತೀಚೆಗೆ ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಕೊಡಗಿನ ಯೋಧ ಅಲ್ತಾಫ್ ನಿವಾಸಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಭೇಟಿ ನೀಡಿದರು.

ಮೃತ ಯೋಧ ಆಲ್ತಾಫ್ ಅವರ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿ ಸಂಸದ ಪ್ರತಾಪ್ ಸಿಂಹ ಸಾಂತ್ವನ ಹೇಳಿದರು.

ಆಲ್ತಾಫ್ ಕುಟುಂಬಕ್ಕೆ 50 ಸಾವಿರ ರೂಪಾಯಿ ಧನ ಸಹಾಯ ಮಾಡಿ, ಬಾಡಿಗೆ ಮನೆಯಲ್ಲಿರುವ ಕುಟುಂಬಕ್ಕೆ ಸರ್ಕಾರಿ ಜಮೀನು ಕೊಡಿಸುವ ಭರವಸೆಯನ್ನು ಸಂಸದರು ನೀಡಿದರು.

ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲು ಕೊಡಗು ಜಿಲ್ಲಾಧಿಕಾರಿಗೆ ಸಂಸದ ಪ್ರತಾಪ ಸಿಂಹ ಮನವಿ ಮಾಡಿದರು.

- Advertisement -

Latest News

error: Content is protected !!