
ಬಂಟ್ವಾಳ: ಪಟಾಕಿ ಅಂಗಡಿಯ ಹಿಂಭಾಗ ನಿಲ್ಲಿಸಿದ್ದ ಮೋಟಾರ್ ಬೈಕ್ಗೆ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿಯ ಬಾಕಿಮಾರು ಗದ್ದೆ ಎಂಬಲ್ಲಿ ನಡೆದಿದೆ. ಬೆಂಕಿಯ ತೀವ್ರತೆಗೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೇಪು ಗ್ರಾಮದ ಪಡಿಬಾಗಿಲು ನಿವಾಸಿ ಮನೋಹರ್ ಅವರಿಗೆ ಸೇರಿದ ಬೈಕ್ ಇದಾಗಿದೆ. ನವೆಂಬರ್ 10ರಂದು ರಾತ್ರಿ ಕೆಲಸ ಮುಗಿಸಿದ ಬಳಿಕ ಮನೋಹರ್ ಅವರು ತಮ್ಮ ಬೈಕ್ ಅನ್ನು ಪಟಾಕಿ ಅಂಗಡಿಯ ಹಿಂಭಾಗದಲ್ಲಿ ನಿಲ್ಲಿಸಿದ್ದರು. ರಾತ್ರಿ ಸುಮಾರು 11 ಗಂಟೆಗೆ ಅಂಗಡಿ ಮುಚ್ಚಿದ ನಂತರ ಉಳಿದಿದ್ದ ಪಟಾಕಿಗಳನ್ನು ತೆಗೆದುಕೊಂಡು ಮನೆಗೆ ತೆರಳಿದ್ದರು.
ನವೆಂಬರ್ 11ರಂದು ಬೆಳಗ್ಗೆ ಸ್ಥಳಕ್ಕೆ ಮರಳಿದಾಗ ಬೈಕ್ ಸಂಪೂರ್ಣ ಸುಟ್ಟು ಹೋಗಿರುವುದು ಕಂಡುಬಂದಿದೆ. ಅಪರಿಚಿತರು ಉದ್ದೇಶಪೂರ್ವಕವಾಗಿ ಬೈಕ್ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಿರುವ ಮನೋಹರ್, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಟಾಕಿ ಅಂಗಡಿಯ ಹಿಂಭಾಗ ನಿಲ್ಲಿಸಿದ್ದ ಮೋಟಾರ್ ಸೈಕಲ್ಗೆ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ವಿಟ್ಲ ಕಸಬಾ ಗ್ರಾಮದ ಅಡ್ಡದ ಬೀದಿಯ ಬಾಕಿಮಾರು ಗದ್ದೆ ಎಂಬಲ್ಲಿ ನಡೆದಿದೆ. ಬೆಂಕಿಯ ತೀವ್ರತೆಗೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೇಪು ಗ್ರಾಮದ ಪಡಿಬಾಗಿಲು ನಿವಾಸಿ ಮನೋಹರ್ ಅವರಿಗೆ ಸೇರಿದ ಬೈಕ್ ಇದಾಗಿದೆ. ನವೆಂಬರ್ 10ರಂದು ರಾತ್ರಿ ಕೆಲಸ ಮುಗಿಸಿದ ಬಳಿಕ ಮನೋಹರ್ ಅವರು ತಮ್ಮ ಬೈಕ್ ಅನ್ನು ಪಟಾಕಿ ಅಂಗಡಿಯ ಹಿಂಭಾಗದಲ್ಲಿ ನಿಲ್ಲಿಸಿದ್ದರು. ರಾತ್ರಿ ಸುಮಾರು 11 ಗಂಟೆಗೆ ಅಂಗಡಿ ಮುಚ್ಚಿದ ನಂತರ ಉಳಿದಿದ್ದ ಪಟಾಕಿಗಳನ್ನು ತೆಗೆದುಕೊಂಡು ಮನೆಗೆ ತೆರಳಿದ್ದರು.
ನವೆಂಬರ್ 11ರಂದು ಬೆಳಗ್ಗೆ ಸ್ಥಳಕ್ಕೆ ಮರಳಿದಾಗ ಬೈಕ್ ಸಂಪೂರ್ಣ ಸುಟ್ಟು ಹೋಗಿರುವುದು ಕಂಡುಬಂದಿದೆ. ಅಪರಿಚಿತರು ಉದ್ದೇಶಪೂರ್ವಕವಾಗಿ ಬೈಕ್ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಿರುವ ಮನೋಹರ್, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


