Thursday, November 12, 2026
Homeಕರಾವಳಿಪರವಾನಗಿ ಇಲ್ಲದೆ ಅಕ್ರಮ ಜಾನುವಾರು ಸಾಗಾಟ; ಜಾನುವಾರು ಸಹಿತ ಪಿಕಪ್ ಪೊಲೀಸರ ವಶಕ್ಕೆ!

ಪರವಾನಗಿ ಇಲ್ಲದೆ ಅಕ್ರಮ ಜಾನುವಾರು ಸಾಗಾಟ; ಜಾನುವಾರು ಸಹಿತ ಪಿಕಪ್ ಪೊಲೀಸರ ವಶಕ್ಕೆ!

- Advertisement -
- Advertisement -

ವಿಟ್ಲ: ಅಗತ್ಯ ಪರವಾನಗಿ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಹನದಲ್ಲಿದ್ದ ಕರೋಪಾಡಿ ನಿವಾಸಿ ಚಾಲಕ ಒ.ಪಿ. ಅಬ್ದುಲ್ಲಾ (45) ಹಾಗೂ ಸುಬ್ರಹ್ಮಣ್ಯ (55) ಅವರನ್ನು ವಿಚಾರಣೆ ನಡೆಸಿದಾಗ, ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಗಿ ಹೊಂದಿಲ್ಲದಿರುವುದು ತಿಳಿದುಬಂದಿದೆ.

ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಅವರ ಸೂಚನೆಯಂತೆ ಜಾನುವಾರುಗಳನ್ನು ಸಾಗಿಸುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಜಾನುವಾರುಗಳ ಸಹಿತ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಒ.ಪಿ. ಅಬ್ದುಲ್ಲಾ, ಸುಬ್ರಹ್ಮಣ್ಯ, ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!