Wednesday, November 11, 2026
Homeಕರಾವಳಿಮಂಗಳೂರುಬಂಟ್ವಾಳ: ಬಿ.ಸಿ.ರೋಡ್ ಫ್ಲೈಓವರ್ ಅಡಿಭಾಗದಲ್ಲಿ ಕಳವಾಗಿದ್ದ ಬುಲೆಟ್ ಬೈಕ್ ಮಂಜೇಶ್ವರದಲ್ಲಿ ಪತ್ತೆ

ಬಂಟ್ವಾಳ: ಬಿ.ಸಿ.ರೋಡ್ ಫ್ಲೈಓವರ್ ಅಡಿಭಾಗದಲ್ಲಿ ಕಳವಾಗಿದ್ದ ಬುಲೆಟ್ ಬೈಕ್ ಮಂಜೇಶ್ವರದಲ್ಲಿ ಪತ್ತೆ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನ ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಲಾಗಿದ್ದ ಬುಲೆಟ್ ಬೈಕ್ ಕಳವಾದ ಘಟನೆಗೆ ಸಂಬಂಧಿಸಿದಂತೆ, ಒಂದು ವಾರದ ಬಳಿಕ ಕಳವಾಗಿದ್ದ ಬೈಕ್ ಗಡಿಪ್ರದೇಶ ಮಂಜೇಶ್ವರದಲ್ಲಿ ಪತ್ತೆಯಾಗಿದ್ದು, ವಾರಸುದಾರರಿಗೆ ಮರಳಿದೆ.

ಪಣೋಲಿಬೈಲು ನಿವಾಸಿ ರಮೇಶ್ ಎಂಬುವರು ತಮ್ಮ ಬುಲೆಟ್ ಬೈಕ್ ಅನ್ನು ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಿ ತೆರಳಿದ್ದರು. ಬಳಿಕ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ ಕಳೆದುಕೊಂಡು ಆತಂಕದಲ್ಲಿದ್ದ ರಮೇಶ್ ಅವರಿಗೆ ಇದೀಗ ಒಂದು ವಾರದ ಬಳಿಕ ಮಂಜೇಶ್ವರದಲ್ಲಿ ಬೈಕ್ ಪತ್ತೆಯಾಗಿರುವುದು ಸಮಾಧಾನ ತಂದಿದೆ.

ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಕೆಲಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿದೆ. ಆದರೆ, ಪೊಲೀಸ್ ಠಾಣೆಯ ತೀರಾ ಸಮೀಪದಲ್ಲೇ ಇರುವ ಈ ಪ್ರದೇಶದಲ್ಲಿ ಪದೇ ಪದೆ ಬೈಕ್ ಕಳವು ಪ್ರಕರಣಗಳು ವರದಿಯಾಗುತ್ತಿರುವುದು ವಾಹನ ಸವಾರರಲ್ಲಿ తీవ్ర ಆತಂಕ ಮೂಡಿಸಿದೆ.

ವಾಹನ ನಿಲ್ಲಿಸಿ ತೆರಳುವವರು ಮರಳಿ ಬರುವವರೆಗೆ ತಮ್ಮ ವಾಹನ ಸುರಕ್ಷಿತವಾಗಿರುತ್ತದೆಯೇ ಎಂಬ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಈ ಭಾಗದಲ್ಲಿ ವಾಹನಗಳ ನಿಲುಗಡೆ ಹೆಚ್ಚಿದ್ದರೂ, ಭದ್ರತೆಯ ದೃಷ್ಟಿಯಿಂದ ಅಗತ್ಯವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಇನ್ನೂ ಅಳವಡಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಿ, ಸೂಕ್ತ ಪೊಲೀಸ್ ನಿಗಾ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!